ಹರಪನಹಳ್ಳಿ: ಮುಖ್ಯಮಂತ್ರಿ ವಿರುದ್ಧ ಅಸಾಂವಿಧಾನಿಕ ಪದ ಬಳಸಿರುವ ಬಿಜೆಪಿ ರವಿಕುಮಾರ ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ (ಐಬಿ) ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರವಿಕುಮಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ರವಿಕುಮಾರ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡರಾದ ಎ.ಎಂ.ವಿಶ್ವನಾಥ, ಮತ್ತೂರು ಬಸವರಾಜ, ಮೈದೂರು ಒ.ರಾಮಪ್ಪ, ಹುಲಿಕಟ್ಟೆ ಚಂದ್ರಪ್ಪ, ಜಾಕೀರ್ ಹುಸೇನ್, ಟಿ.ಎಚ್.ಎಂ.ಮಂಜುನಾಥ, ಎಚ್.ವಸಂತಪ್ಪ, ಕುಂಚೂರು ಇಬ್ರಾಹಿಂ, ಜಾಕೀರ ಹುಸೇನ್, ಟಿ.ವೆಂಕಟೇಶ, ನೀಲಗುಂದ ವಾಗೀಶ, ಮಂಜನಾಯ್ಕ, ಎಚ್. ಬಸವರಾಜ್, ಎಸ್.ಬಸವರಾಜ, ಇಸ್ಮಾಯಿಲ್, ಗಣೇಶ, ಮಹಾಂತೇಶ, ಉಮಾ, ಅಡವಿಹಳ್ಳಿ ರಾಜು, ದೇವೇಂದ್ರಗೌಡ, ಚೌಡಪ್ಪ, ಗೋಣಿಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.