ಹೊಸಪೇಟೆ (ವಿಜಯನಗರ): ಪುನರ್ವಸತಿ ಕಲ್ಪಿತ ಮಾಜಿ ದೇವದಾಸಿಯರಿಗೆ ಮೂಲಸೌಕರ್ಯ ಒದಗಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.
ಮಾಜಿ ದೇವದಾಸಿಯರಿಗೆ ನಿವೇಶನ ಕೊಡಬೇಕು. ಮನೆ ಕಟ್ಟಿಸಿಕೊಡಬೇಕು. ಉಳುಮೆ ಮಾಡಿ ಬದುಕಲು ಕೃಷಿ ಜಮೀನು ಕೊಡಬೇಕು. ಪಿಂಚಣಿ ಕೊಡಬೇಕು. ಸರ್ವೇಯಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಹೊಸದಾಗಿ ಸರ್ವೇ ನಡೆಸಿ, ಬಿಟ್ಟು ಹೋದವರ ಹೆಸರು ಸೇರಿಸಿ, ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಎ. ಗಾಳೆಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.