ADVERTISEMENT

ಅರಸೀಕೆರೆ: ಕಸಕ್ಕೆ ಬೆಂಕಿ; ಸಂತೆಗೆ ಹರಡಿದ ಹೊಗೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 15:45 IST
Last Updated 15 ಜೂನ್ 2023, 15:45 IST
ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಸಂತೆಯ ಮುಂಭಾಗದ ರಸ್ತೆಯಲ್ಲಿ ಗುರುವಾರ ಅಕಸ್ಮಿಕ ಬೆಂಕಿ ತಗುಲಿ, ಸಂತೆಯಲ್ಲಿ ಹೊಗೆ ಹರಡಿಕೊಂಡಿತ್ತು
ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಸಂತೆಯ ಮುಂಭಾಗದ ರಸ್ತೆಯಲ್ಲಿ ಗುರುವಾರ ಅಕಸ್ಮಿಕ ಬೆಂಕಿ ತಗುಲಿ, ಸಂತೆಯಲ್ಲಿ ಹೊಗೆ ಹರಡಿಕೊಂಡಿತ್ತು   

ಅರಸೀಕೆರೆ: ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಸಂತೆಯ ಮುಂಭಾಗದ ರಸ್ತೆಯಲ್ಲಿ ಗುರುವಾರ ಅಕಸ್ಮಿಕ ಬೆಂಕಿ ತಗುಲಿ, ಸಂತೆಯಲ್ಲೆಡೆ ಹೊಗೆ ಹರಡಿತ್ತು.

ಹೊಗೆಯಿಂದಾಗಿ ಅಂಗಡಿಗಳಲ್ಲಿ ವ್ಯಾಪಾರ ಮಾಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರು. ವರ್ತಕರು ಕಣ್ಣು ಉಜ್ಜುತ್ತಾ ತರಕಾರಿ ಮಾರಾಟ ಮಾಡುವಲ್ಲಿ ತೊಡಗಿದ್ದರು.

ರಸ್ತೆ ಬದಿಯಲ್ಲಿ ಬೆಂಕಿ ಉರಿಯುತ್ತಿದ್ದರಿಂದ ಸಾರ್ವಜನಿಕರು ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಎದುರಾಯಿತು. ಗಂಟೆಯ ಬಳಿಕ ಬೆಂಕಿ ನಂದಿದ್ದು, ವಾತಾವರಣ ತಿಳಿಗೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.