ಹೊಸಪೇಟೆ (ವಿಜಯನಗರ): ಜಾಗತಿಕ ಮಟ್ಟದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ, ಇದನ್ನು ತಗ್ಗಿಸುವ ಹೊಣೆ ಯುವಜನತೆ ಸಹಿತ ನಮ್ಮೆಲ್ಲರ ಮೇಲಿದೆ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಹೇಳಿದರು.
ಅವರು ಶುಕ್ರವಾರ ಡಿಎಆರ್ ಮೈದಾನದ ಆವರಣದಲ್ಲಿ ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ಸಿಎಸ್‌ಆರ್ ಯೋಜನೆಯ ಪರಿಸರ ದಿನ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಕಾಡು ಬೆಳೆಸಿದಾಗ ಜಾಗತಿಕ ತಾಪಮಾನ ತಗ್ಗುತ್ತದೆ, ಹಳ್ಳಿ, ಪಟ್ಟಣಗಳಲ್ಲಿ ವಿದ್ಯಾರ್ಥಿಗಳಿಗೆ ಈ ಸಂದೇಶ ತಲುಪಬೇಕಾಗಿದೆ ಎಂದರು.
ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ಅಧಿಕಾರಿ ವೇದವ್ಯಾಸ ಮಾತನಾಡಿದರು. ಡಿವೈಎಸ್‌ಪಿಗಳಾದ ಟಿ.ಮಂಜುನಾಥ್, ಮಲ್ಲೇಶ್ ದೊಡ್ಡಮನಿ, ವೆಂಕಟಪ್ಪ ನಾಯಕ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.