ADVERTISEMENT

ಗೂಡ್ಸ್ ವಾಹನ ಪಲ್ಟಿ; ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 13:06 IST
Last Updated 28 ಏಪ್ರಿಲ್ 2022, 13:06 IST
   

ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ರಂಗನಾಥನಹಳ್ಳಿ ಬಳಿ ಗೂಡ್ಸ್ ವಾಹನ ಪಲ್ಟಿಯಾಗಿದ್ದರಿಂದ ಬಾಲಕಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ರಂಗನಾಥನಹಳ್ಳಿಯ ಪುಷ್ಪ(13) ಮೃತರು. ದಾವಣಗೆರೆಯಿಂದ ಸ್ವ-ಗ್ರಾಮಕ್ಕೆ ಮರಳುವಾಗ ತಿರುವಿನ ಬಳಿ ಟೈರ್ ಸಿಡಿದು, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಸ್ಥಳಕ್ಕೆ ಕಾನಹೊಸಹಳ್ಳಿಯ ಅಪರಾಧ ವಿಭಾಗದ ಪಿಎಸ್ಐ ನಾಗರತ್ನಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.