ಹಂಪಿಯಲ್ಲಿ ಶುಕ್ರವಾರ ರಾತ್ರಿ ಹಂಪಿ ಉತ್ಸವಕ್ಕೆ ಡಮರು ಬಾರಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್, ಎಚ್.ಆರ್.ಗವಿಯಪ್ಪ, ನೇಮಿರಾಜ ನಾಯ್ಕ್, ಸಚಿವ ಜಮೀರ್ ಅಹಮದ್ ಖಾನ್, ಸಂಸದ ರಾಜಶೇಖರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಇದ್ದರು
–ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆ (ವಿಜಯನಗರ): ‘500 ವರ್ಷಗಳ ಹಿಂದೆಯೇ ಕನ್ನಡದ ಗಟ್ಟಿ ನೆಲವಾಗಿದ್ದ ಹಂಪಿ ಇಂದು ಸಹ ಅದನ್ನು ಉಳಿಸಿಕೊಂಡಿದ್ದು, ಇಂತಹ ಉತ್ಸವಗಳಿಗೆ ಸರ್ಕಾರದ ಅನುದಾನದಲ್ಲಿ ಕೊರತೆ ಆಗುವುದಿಲ್ಲ’ ಎಂದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಇಲ್ಲಿ ಶುಕ್ರವಾರ ಹಂಪಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಎಂ.ಪಿ.ಪ್ರಕಾಶ್ ಅವರು ಉತ್ಸವ ಸಂಸ್ಕೃತಿಗೆ ನಾಂದಿ ಹಾಡಿದರು. ಅವರ ಪ್ರೇರಣೆಯಿಂದ ಹಂಪಿಯ ಜತೆಗೆ ಆನೆಗುಂದಿ, ಕನಕಗಿರಿ ಸಹಿತ ಹಲವು ಉತ್ಸವಗಳನ್ನು ಆಚರಿಸಲಾಗುತ್ತಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ನಟ ರಮೇಶ್ ಅರವಿಂದ್, ನಟಿಯರಾದ ಪ್ರೇಮಾ, ಪೂಜಾ ಗಾಂಧಿ ಮಾತನಾಡಿದರು. ಜಿಲ್ಲೆಯ ಶಾಸಕರು ಹಾಜರಿದ್ದರು. ಫಲಫುಷ್ಪ ಪ್ರದರ್ಶನ ಸಹಿತ ಹಲವು ಪ್ರದರ್ಶನಗಳನ್ನು ಉದ್ಘಾಟಿಸಲಾಯಿತು.
ಸಿಎಂ, ಡಿಸಿಎಂ, ಪ್ರವಾಸೋದ್ಯಮ ಸಚಿವರ ಗೈರು, ಬಿಸಿಲು, ಪರೀಕ್ಷೆ ಸಹಿತ ಹಲವು ಕಾರಣಗಳಿಂದ ಈ ಬಾರಿಯ ಹಂಪಿ ಉತ್ಸವದ ಮೊದಲ ದಿನ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಬರಲಿಲ್ಲ. ಕಳೆದ ವರ್ಷ ಮೊದಲ ದಿನ 1.50 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.