ಹರಪನಹಳ್ಳಿ: ತಾಲ್ಲೂಕಿನ 117 ಹಳ್ಳಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಕಾರಣ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಉಪಗ್ರಾಮ ಗುರುತಿಸಿ, ಅವುಗಳಿಗೆ ಕಂದಾಯ ಗ್ರಾಮ ಸ್ಥಾನ ಕಲ್ಪಿಸಿರುವುದು.
ಸ್ವಾತಂತ್ರ್ಯಗತಿಸಿ 7 ದಶಕಗಳ ಬಳಿಕ ಒಟ್ಟು 117 ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ದೊರೆತಿದೆ. ಇವುಗಳಲ್ಲಿ ಈಗಾಗಲೇ ಅಧಿಸೂಚನೆ ಹೊರಡಿಸಿ 60 ಹಳ್ಳಿಗಳಿಗೆ ಕಂದಾಯ ಗ್ರಾಮದ ಸ್ಥಾನ ದೊರೆತು, ಜನರಿಗೆ ಪ್ರಮಾಣ ಪತ್ರಗಳ ವಿತರಣೆ ಕಾರ್ಯವು ಶುರುವಾಗಿದೆ.
ಪಟ್ಟಣಕ್ಕೆ ಸಮೀಪದ ಹೊಂಬಳಗಟ್ಟಿ ಗ್ರಾಮದಲ್ಲಿ 600ಕ್ಕೂ ಹೆಚ್ಚು ಮನೆಗಳಿದ್ದರೂ ಕಂದಾಯ ಗ್ರಾಮದ ಸ್ಥಾನ ದೊರೆತಿರಲಿಲ್ಲ, ಈ ಬಾರಿ ಅದು ಸಾಕಾರ ಗೊಂಡಿರುವುದಕ್ಕೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿ, ಸಂಭ್ರಮಿಸಿದ್ದಾರೆ. ಕೆರೆಗುಡಿಹಳ್ಳಿ, ದಡಿಗಾರನಹಳ್ಳಿ, ಗಂಗಾಪುರ, ಹೊನ್ನೇನಹಳ್ಳಿ, ಗುಳೇದಹಟ್ಟಿ ತಾಂಡಗಳಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಶ್ರಮದಿಂದಾಗಿ ನಮ್ಮೂರುಗಳಿಗೆ ಕಂದಾಯ ಸ್ಥಾನಮಾನ ದೊರೆತು, ನಾವು ಅಲೆದಾಡುವುದು ತಪ್ಪಿದಂತಾಗಿದೆ ಎಂದು ಸಂಭ್ರಮಿಸುತ್ತಿದ್ದಾರೆ.
ಎಐಟಿಯುಸಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಶ್ರಮದಿಂದ ಉಪ ಗ್ರಾಮಗಳು ಕಂದಾಯ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಇದರಿಂದ ಪ್ರತಿ ಗ್ರಾಮಗಳಲ್ಲಿ ಜನರು ಅಲೆದಾಡುವುದು ತಪ್ಪುತ್ತದೆ. ಇನ್ನುಳಿದ ಹಳ್ಳಿಗಳನ್ನು ಕಂದಾಯ ಗ್ರಾಮವನ್ನಾಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೊದಲು 80 ಗ್ರಾಮಗಳಿದ್ದವು. ಈಗ ತಾಲ್ಲೂಕಿನಲ್ಲಿ ಒಟ್ಟು 117 ಹಳ್ಳಿಗಳನ್ನು ಗುರುತಿಸಲಾಗಿದೆ. ಈಗಾಗಲೇ 60 ಹಳ್ಳಿ ಕಂದಾಯ ಗ್ರಾಮಗಳಾಗಿವೆ. 57 ಹಳ್ಳಿಗಳು ಹಂತ ಹಂತವಾಗಿ ಕಂದಾಯ ಗ್ರಾಮಗಳಾಗುತ್ತವೆಬಿ.ವಿ.ಗಿರೀಶ್ ಬಾಬು ತಹಶೀಲ್ದಾರ್ ಹರಪನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.