ADVERTISEMENT

ಸಂಡೂರು | ಭಾರಿ ಗಾಳಿ– ಮಳೆಗೆ ಧರೆಗೆ ಉರಳಿದ ವಿದ್ಯುತ್ ಕಂಬ, ಮರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 13:10 IST
Last Updated 13 ಏಪ್ರಿಲ್ 2025, 13:10 IST
ಸಂಡೂರು ತಾಲ್ಲೂಕಿನ ಬೊಮ್ಮಗಟ್ಟ ಗ್ರಾಮದಲ್ಲಿ ಶನಿವಾರ ಸುರಿದ ಮಳೆಗೆ ವಿದ್ಯುತ್ ಕಂಬ, ಮರಗಳು ಧರೆಗೆ ಉರಳಿದವು
ಸಂಡೂರು ತಾಲ್ಲೂಕಿನ ಬೊಮ್ಮಗಟ್ಟ ಗ್ರಾಮದಲ್ಲಿ ಶನಿವಾರ ಸುರಿದ ಮಳೆಗೆ ವಿದ್ಯುತ್ ಕಂಬ, ಮರಗಳು ಧರೆಗೆ ಉರಳಿದವು   

ಸಂಡೂರು: ತಾಲ್ಲೂಕಿನ ಚೋರುನೂರು ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಗುಡುಗು, ಸಿಡಿಲು ಸಹಿತ ಉತ್ತಮ ಮಳೆ ಸುರಿದಿದ್ದರಿಂದ ಗಾಳಿ ಮಳೆಗೆ ವಿದ್ಯುತ್ ಕಂಬ, ಮರಗಳು ಧರೆಗೆ ಉರಳಿ ಬಿದ್ದಿವೆ.

ಚೋರುನೂರು, ಬೋಮ್ಮಗಟ್ಟ, ಸ್ವಾಮಿಹಳ್ಳಿ, ತುಂಬರಗುದ್ದಿ, ಯರದಮ್ಮನಹಳ್ಳಿ, ಜಿ.ಎಲ್.ಹಳ್ಳಿ, ವಡ್ಡಿನಕಟ್ಟೆ ಗ್ರಾಮಗಳು ಸೇರಿದಂತೆ ಇತರೆ ಗ್ರಾಮಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು.

ಬೋಮ್ಮಗಟ್ಟ ಗ್ರಾಮದ ಹುಲಿಕುಂಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಗಾಳಿ ಮಳೆಗೆ ಎರಡು ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿ ಬಿದ್ದಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ, ಕಂಬಗಳು ರಸ್ತೆಗೆ ಉರಳಿ ಬಿದ್ದಿದ್ದರಿಂದ ಕೆಲಕಾಲ ಸಂಚಾರಕ್ಕಾಗಿ ಜನರು ಪರಿತಪಿಸಿದರು. ಗ್ರಾಮದ ಜನರೇ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.