ಹೊಸಪೇಟೆ (ವಿಜಯನಗರ): ತಾತ್ಕಾಲಿಕವಾಗಿಯೇ ಆದರೂ ನಗರಕ್ಕೆ ಬರುವ ಯಾರೂ ಆಶ್ರಯ ರಹಿತರಾಗಿರಬಾರದು ಎನ್ನವುದಕ್ಕಾಗಿಯೇ ನಗರಸಭೆಯ ಎರಡು ವಸತಿ ರಹಿತರ ಆಶ್ರಯ ಕೇಂದ್ರಗಳನ್ನು ತೆರೆದಿದ್ದು ಅವುಗಳ ಪ್ರಯೋಜನ ದೊರೆಯುವಂತಾಗಬೇಕು ಎಂದು ನಗರಸಭೆಯ ಸಮುದಾಯ ಸಂಘಟನಾಧಿಕಾರಿ ರವಿಕುಮಾರ ಹೇಳಿದರು.
ನಗರಸಭೆಯಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಸತಿ ರಹಿತರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದ ಎರಡು ವಸತಿ ರಹಿತರ ಕೇಂದ್ರಗಳಲ್ಲಿ 80 ಜನ ಆಶ್ರಯ ಪಡೆಯಲು ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಇದರ ನಿರ್ವಹಣೆಗೂ ವ್ಯವಸ್ಥೆ ಇದೆ. ಜನ ಇದನ್ನು ಬಳಸಿಕೊಳ್ಳಬೇಕು, ವಿವಿಧ ಇಲಾಖೆಗಳ ಸಹಕಾರವೂ ಬೇಕು ಎಂದರು.
ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಯೋಜನಾ ಸಂಯೋಜಕ ಅನಂತ ಜೋಷಿ ಮಾತನಾಡಿ, ಇದು ನಗರಸಭೆಯಿಂದ ನಡೆಯುತ್ತಿರುವ ಸಂಪೂರ್ಣ ಉಚಿತ ಸೇವೆ. ವಸತಿ ಇಲ್ಲ ಎಂದು ಯಾರೂ ಬಸ್‌ನಿಲ್ದಾಣ, ರಸ್ತೆ ಬದಿಯಲ್ಲಿ ಮಲಗದೆ ಇಲ್ಲಿಗೆ ಬರಬೇಕು. ಬಸ್ ನಿಲ್ದಾಣದ ಎದುರಲ್ಲೇ ಹಾಗೂ ಸೋಗಿ ಮಾರ್ಕೆಟ್ ಬಸವಣ್ಣ ಕಾಲುವೆ ಸಮೀಪ ಈ ಕೇಂದ್ರಗಳಿವೆ ಎಂದರು.
ಕೆಕೆಆರ್‌ಟಿಸಿ ಸಹಾಯಕ ಸಂಚಾರ ಅಧಿಕಾರಿ ಸುಶೀಲಾ, ಆರೋಗ್ಯ ಇಲಾಖೆಯ ಧರ್ಮನಗೌಡ, ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಚಂದ್ರಹಾಸ, ಕೇಂದ್ರ ವ್ಯವಸ್ಥಾಪಕ ಜಿ.ಕೆ.ಜೋಶಿ, ವಸತಿ ಕೇಂದ್ರ ಪಾಲಕರಾದ ವಿರೂಪಾಕ್ಷಿ, ಪಾರ್ವತಿ, ಯರಿಸ್ವಾಮಿ, ತರುಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.