ಹೊಸಪೇಟೆ (ವಿಜಯನಗರ): ಅಂಗವಿಕಲರಿಗೆ ಮೋಟಾರ್ ಚಾಲಿತ ವಾಹನ ನೀಡಬೇಕೆಂದು ಬುಧವಾರ ಇಲ್ಲಿ ಅಂಗವಿಕಲರ ಸಂಘಟಣೆಯ ನಗರ ಘಟಕದ ವತಿಯಿಂದ ನಗರಸಭೆಯ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
‘ನಗರಸಭೆಯ ಶೇ 5ರ ಅಂಗವಿಕಲರ ಅನುದಾನದಲ್ಲಿ ಮೋಟಾರ್ ಚಾಲಿತ ವಾಹನಗಳನ್ನ ವಿತರಣೆ ಮಾಡಲಿದ್ದು, ಸರ್ಕಾರದ ನಿಮಯಗಳು ಮತ್ತು ಅಂಗವಿಕಲರ ಇಲಾಖೆಯ ನಿಯಮಗನ್ನು ಅನುಸರಿಸಿ ಇಲ್ಲಿವರೆಗೂ ಯಾರಿಗೆ ಮೋಟಾರ್ ಚಾಲಿತ ವಾಹನಗಳು ಸಿಕ್ಕಿಲ್ಲವೋ ಅಂತವರನ್ನ ಪರಿಗಣಿಸಿ ನೀಡಬೇಕು’ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಅರ್ಹರಿಗೆ ವಾಹನ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರ ಘಟಕ ಅಧ್ಯಕ್ಷ ಲೋಹಿತ್ ತಳವಾರ್, ಉಪಾಧ್ಯಕ್ಷ ಮೆಹಬೂಬ್ ಬಾಷಾ, ಕಾರ್ಯದರ್ಶಿ ಪಾಂಡು ನಾಯ್ಕ್, ಎನ್.ವೆಂಕಟೇಶ್, ಎನ್.ಹುಲಿಗೆಮ್ಮ, ರಾಜಸಾಬ್, ಹುಲುಗಪ್ಪ, ತಾಯಣ್ಣ, ಹಜರತ್ ಅಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.