ADVERTISEMENT

ಹೊಸಪೇಟೆ: ಅಂಗವಿಕಲರ ಸಮಸ್ಯೆ ಬಗೆಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 10:24 IST
Last Updated 4 ಆಗಸ್ಟ್ 2022, 10:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಅಂಗವಿಕಲರ ಕುಂದು ಕೊರತೆಗಳನ್ನು ಆಲಿಸುವ ಸಂಬಂಧ ತ್ರೈಮಾಸಿಕ ಸಭೆ ಕರೆಯುವಂತೆ ಒತ್ತಾಯಿಸಿ ವಿಕಲಚೇತನರ ಸಂಘದವರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂಬಂಧ ನಗರಸಭೆ ಪೌರಾಯುಕ್ತ, ತಹಶೀಲ್ದಾರ್‌, ಅಂಗವಿಕಲರ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ನಂತರ ಮನವಿ ಪತ್ರ ಸಲ್ಲಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ಅಂಗವಿಕಲರ ಸಭೆ ಕರೆದು, ಕುಂದು ಕೊರತೆ ಆಲಿಸಿ ಬಗೆಹರಿಸಬೇಕು. ಆದರೆ, ಕೆಲ ವರ್ಷಗಳಿಂದ ಯಾವುದೇ ಸಭೆ ನಡೆದಿಲ್ಲ. ಅಂಗವಿಕಲರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸೌಲಭ್ಯಗಳಿಗೆ ವಿವಿಧ ಕಚೇರಿಗಳಿಗೆ ಅಲೆದಾಡುವುದು ಕೆಲಸವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಮೀಸಲಿರುವ ಶೇ 5ರಷ್ಟು ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ನಿವೇಶನ ರಹಿತರಿಗೆ ನಿವೇಶನಗಳನ್ನು ಕೊಟ್ಟಿಲ್ಲ. ಮುಂದಿನ ವಾರದೊಳಗೆ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.

ADVERTISEMENT

ಸಂಘದ ನಗರ ಘಟಕದ ಅಧ್ಯಕ್ಷ ಲೋಹಿತ್ ತಳವಾರ, ಸಲಹೆಗಾರ ಎನ್.ವೆಂಕಟೇಶ್, ಮುಖಂಡರಾದ ಜಿ.ಮುಕ್ಕಣ್ಣ, ಜಿ.ಅಂಜಿನಿ, ಕೆ.ರಾಜಸಾಬ್, ಕೆ.ಹುಲುಗಪ್ಪ. ಅರುಣ್, ಪರಶುರಾಮ, ಮೆಹಬೂಬ್ ಬಾಷ, ಹಾಜಿ, ಪಾಂಡು ನಾಯ್ಕ, ಮಂಜುಳಾ, ತಾಯಮ್ಮ, ರೇಣುಕಾ, ಲಕ್ಷ್ಮಿ, ಶಮೀನಾ, ದಾದಾಪೀರ್, ಆಲಂ, ತಾಯಣ್ಣ, ರಾಜಶೇಖರ್, ಹುಲಿಗೆಮ್ಮ, ರಮೇಶ್, ಹುಲುಗಪ್ಪ ಎಚ್., ಆಜಂ ಪಾಷ, ತಂಗರಾಜ್, ಮೌನೇಶ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.