ADVERTISEMENT

ಕಮಲಾಪುರ ಪುರಸಭೆ ವಾರ್ಡ್‌ ವಿಂಗಡನೆ: ಆಕ್ಷೇಪಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:05 IST
Last Updated 10 ಅಕ್ಟೋಬರ್ 2025, 6:05 IST

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪುರಸಭೆ ಮೇಲ್ದರ್ಜೆಗೇರಿಸಿದ ಬಳಿಕ ಜನಸಂಖ್ಯೆ ಆಧಾರದ ಮೇರೆಗೆ 23 ವಾರ್ಡ್‌ಗಳಾಗಿ ವಿಂಗಡಣೆ ಮಾಡಿದ ಚೆಕ್‌ಬಂದಿ ಹಾಗೂ ಜನಸಂಖ್ಯೆ ವಿವರಗಳನ್ನು ಪ್ರಕಟಣೆ ಹೊರಡಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಕಲಂ 358ರ ಅನ್ವಯ 20 ವಾರ್ಡ್‌ಗಳನ್ನು 23 ವಾರ್ಡ್‌ಗಳಾಗಿ ಪುನರ್ ವಿಂಗಡಣೆ ಮಾಡಿರುವ ಚೆಕ್‌ಬಂದಿ ಹಾಗೂ ಜನಸಂಖ್ಯೆ ವಿವರಗಳನ್ನು ಕರ್ನಾಟಕ ರಾಜ್ಯಪತ್ರ ಭಾಗ-6ಸಿ ರಲ್ಲಿ ಜಿಲ್ಲಾಧಿಕಾರಿ ಅವರು ಕರಡು ಅಧಿಸೂಚನೆಯನ್ನು ಡಿ.ಸಿ ಕಚೇರಿ, ಸಿ.ಸಿ ಕಾರ್ಯಾಲಯ, ತಾಲ್ಲೂಕು ಕಚೇರಿ, ಕಮಲಾಪುರ ಪುರಸಭೆ ಕಾರ್ಯಾಲಯ ಸೇರಿದಂತೆ ಹೊಸಪೇಟೆ ನಗರಸಭೆ ಕಾರ್ಯಾಲಯದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅ.13 ರೊಳಗೆ ಕಮಲಾಪುರ ಪುರಸಭೆ ಕಾರ್ಯಾಲಯದಲ್ಲಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT