ADVERTISEMENT

ಹೊಸಪೇಟೆ: ಆನಂದ್‌ ಸಿಂಗ್‌ ಸಹೋದರಿ ಮನೆಗೆ ಕಾಂಗ್ರೆಸ್‌ ಅಭ್ಯರ್ಥಿ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 13:53 IST
Last Updated 12 ಏಪ್ರಿಲ್ 2023, 13:53 IST
ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ ಅವರು ರಾಣಿ ಸಂಯುಕ್ತಾ ಭೇಟಿಯಾಗಿ ಮಾತುಕರೆ ನಡೆಸಿದ್ದಾರೆ.
ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ ಅವರು ರಾಣಿ ಸಂಯುಕ್ತಾ ಭೇಟಿಯಾಗಿ ಮಾತುಕರೆ ನಡೆಸಿದ್ದಾರೆ.   

ಹೊಸಪೇಟೆ (ವಿಜಯನಗರ): ಟಿಕೆಟ್‌ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ರಾಣಿ ಸಂಯುಕ್ತಾ ಅವರನ್ನು ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ ಅವರು ಬುಧವಾರ ಅವರ ನಗರದಲ್ಲಿನ ಮನೆಗೆ ತೆರಳಿ ಭೇಟಿ ಮಾಡಿ ಬೆಂಬಲ ಯಾಚಿಸಿದರು.

‘ಗವಿಯಪ್ಪನವರು ನನ್ನ ಮನೆಗೆ ಬಂದಿದ್ದು ನಿಜ. ಪ್ರಚಾರಕ್ಕೆ ಬಂದು ನನ್ನ ಮನೆಗೆ ಬಂದು ಹೋಗಿದ್ದಾರೆ. ಮತ ಹಾಕಬೇಕೆಂದು ಕೇಳಿದ್ದಾರೆ’ ಎಂದು ರಾಣಿ ಸಂಯುಕ್ತಾ ತಿಳಿಸಿದ್ದಾರೆ.

ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಅವರಿಗೆ ವಿಜಯನಗರ ಕ್ಷೇತ್ರದ ಟಿಕೆಟ್‌ ನೀಡಿರುವುದಕ್ಕೆ ರಾಣಿ ಸಂಯುಕ್ತಾ ಬುಧವಾರ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.