ADVERTISEMENT

ಮಾಧ್ಯಮಕ್ಕೆ ಏನು ಹೇಳಿಕೆ ಕೊಟ್ಟಿದ್ದೇನೋ ಅದನ್ನೇ ಸಿಎಂಗೆ ಹೇಳುವೆ: ಬಿ.ಆರ್.ಪಾಟೀಲ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 8:51 IST
Last Updated 24 ಜೂನ್ 2025, 8:51 IST
<div class="paragraphs"><p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಮಂಗಳವಾರ ಶಾಸಕ ಬಿ.ಆರ್.ಪಾಟೀಲ್‌ ಅವರನ್ನು ಭೇಟಿ ಮಾಡಿದ ಹೊರಗುತ್ತಿಗೆ ಕಾರ್ಮಿಕರು ತಮಗೆ 11 ತಿಂಗಳಿಂದ ಸಂಬಳ ಆಗಿಲ್ಲ ಎಂದು ದೂರಿದರು</p></div>

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಮಂಗಳವಾರ ಶಾಸಕ ಬಿ.ಆರ್.ಪಾಟೀಲ್‌ ಅವರನ್ನು ಭೇಟಿ ಮಾಡಿದ ಹೊರಗುತ್ತಿಗೆ ಕಾರ್ಮಿಕರು ತಮಗೆ 11 ತಿಂಗಳಿಂದ ಸಂಬಳ ಆಗಿಲ್ಲ ಎಂದು ದೂರಿದರು

   

ಹೊಸಪೇಟೆ (ವಿಜಯನಗರ): ‘ನಾನು ಏನು ಹೇಳಬೇಕೆಂದುಕೊಂಡಿದ್ದನೋ ಅದನ್ನು ನಿನ್ನೆಯೇ ಕಲಬುರ್ಗಿಯಲ್ಲಿ ಹೇಳಿದ್ದೇನೆ. ಪೇಪರ್‌ನಲ್ಲಿ ಏನು ಪ್ರಕಟವಾಗಿದೆಯೋ ಅದನ್ನೇ ನಾನು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಗೆ ತಿಳಿಸುವೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್.ಪಾಟೀಲ್‌ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಪಾಲ್ಗೊಳ್ಳಲು ಕ್ಯಾಂಪಸ್‌ಗೆ ಆಗಮಿಸಿದ್ದ ಅವರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ವೇಳೆ ಈ ವಿಷಯ ತಿಳಿಸಿದರು.

ADVERTISEMENT

ಹಲವು ಶಾಸಕರಲ್ಲಿ ಹಾಗೂ ದೇಶಪಾಂಡೆ, ರಾಯರೆಡ್ಡಿ ಅವರಂತಹ ಹಿರಿಯ ಮುಖಂಡರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿರುವ ಬಗ್ಗೆ ಕೇಳಿದಾಗ, ಸಂಸಾರ ಎಂದ ಮೇಲೆ ಗಂಡ ಹೆಂಡತಿ ಜಗಳ ಇದ್ದೇ ಇರುತ್ತದೆ, ಅದೇ ರೀತಿಯಲ್ಲಿ ಪಕ್ಷದಲ್ಲೂ ಇದೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

11 ತಿಂಗಳಿಂದ ವೇತನ ಇಲ್ಲ: ವಿಶ್ವವಿದ್ಯಾಲಯದ 47 ಮಂದಿ ಗುತ್ತಿಗೆ ಕಾರ್ಮಿಕರ ಪೈಕಿ ಕೆಲವರು ಪಾಟೀಲ್‌ ಅವರನ್ನು ಭೇಟಿ ಮಾಡಿ, ತಮಗೆ 11 ತಿಂಗಳಿಂದ ಸಂಬಳ ನೀಡಿಲ್ಲ ಎಂದು ದೂರಿದರು. ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟದ ಕುರಿತಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಅವರು ಬರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.