ವಿಜಯನಗರ (ಹೊಸಪೇಟೆ): ‘ಭಾಷೆ ಶಕ್ತಿ ಮಾಡಿಕೊಂಡಾಗ ಬದುಕು ಹಸನಾಗುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಹೇಳಿದರು.
ಇಲ್ಲಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆ.ಎಲ್.ಇ ದತ್ತಿ ನಿಧಿಯ ಲೋಕ ತಾಯಿನುಡಿ ದಿನಾಚರಣೆ, ವಾರದ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ, ಭಾಷಾ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡವನ್ನು ಅನ್ನದ ಭಾಷೆ, ಬದುಕಿನ ಭಾಷೆಯಾಗಿ ಮಾರ್ಪಡಿಸಿಕೊಳ್ಳಲು ಸಾಧ್ಯ’ ಎಂದರು.
ಪ್ರಾಧ್ಯಾಪಕ ಮಲ್ಲಿಕಾರ್ಜುನ ಮೇಟಿ, ‘ಕನ್ನಡ ಭಾಷೆಯನ್ನು ನಾವು ಕೇವಲ ಗೀಳಾಗಿಸಿಕೊಂಡಿದ್ದೇವೆ. ಆರಾಧನೆ, ನಿರಾಕರಣೆ ಎನ್ನುವ ಮೂಲಕ ಕನ್ನಡವನ್ನು ಕೈ ಬಿಟ್ಟರೆ ಬದುಕು ಬಲು ಕಷ್ಟ.ಕನ್ನಡವನ್ನು ಬಿಟ್ಟರೆ ಏನನ್ನೂ ಸಹ ಸಾಧಿಸಲಾಗುವುದಿಲ್ಲ ಎನ್ನುವ ಹುಸಿ ಪ್ರೀತಿಯನ್ನು ತೋರಿಸುತ್ತಿದ್ದೇವೆ’ ಎಂದರು.
ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ಡಿ. ಪಾಂಡುರಂಗ ಬಾಬು, ಪ್ರಾಧ್ಯಾಪಕರಾದ ಅಶೋಕಕುಮಾರ ರಂಜೇರೆ, ಪಿ. ಮಹಾದೇವಯ್ಯ, ಸಿಂಡಿಕೇಟ್ ಸದಸ್ಯರಾದ ಸಮಿಉಲ್ಲಾ ಖಾನ್, ಪ್ರೊ. ಎಚ್.ಎಸ್. ರಘುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.