ADVERTISEMENT

ವಿಜಯನಗರ: ಮೈಲಾರಜ್ಜನ ಜಾತ್ರೆಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:52 IST
Last Updated 31 ಜನವರಿ 2026, 15:52 IST
   

ಮೈಲಾರ: ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆ ಎನಿಸಿಕೊಂಡಿರುವ ವಿಜಯನಗರ ಜಿಲ್ಲೆಯ ಮೈಲಾರದಲ್ಲಿರುವ ಮೈಲಾರಲಿಂಗೇಶ್ವರ ಜಾತ್ರೆಗೆ ಪ್ರತಿ ವರ್ಷದಂತೆ ಈ ವರ್ಷವೂ ಹಾವೇರಿ ಜಿಲ್ಲೆಯಿಂದ ಭಕ್ತರು ದಂಡು ಹೊರಟಿದೆ.

ಭಾರತ ಹುಣ್ಣಿಮೆ ದಿನದಿಂದ ಆರಂಭವಾಗುವ ಜಾತ್ರೆಯಲ್ಲಿ ಗೊರವಜ್ಜ ಹೇಳುವ ಕಾರಣಿಕ ಹೆಚ್ಚು ಪ್ರಸಿದ್ಧಿ ಪಡೆದಿದೆ. ಜಾತ್ರೆಯಲ್ಲಿ ಲಕ್ಷಗಟ್ಟಲೇ ಜನರು ಪಾಲ್ಗೊಂಡು, ಕಾರಣಿಕ ಕೇಳುತ್ತಾರೆ. ಅದೇ ಕಾರಣಿಕದಲ್ಲಿ ರಾಜ್ಯ ಹಾಗೂ ದೇಶದ ಭವಿಷ್ಯ ಅಡಗಿದೆ ಎಂಬುದಾಗಿ ಭಕ್ತರು ಹೇಳುತ್ತಾರೆ.

ಹಾವೇರಿ ಜಿಲ್ಲೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮೈಲಾರಲಿಂಗೇಶ್ವರ ದೇವರ ಭಕ್ತರಿದ್ದಾರೆ. ಭಾರತ ಹುಣ್ಣಿಮೆಯಂದು ಭಕ್ತರು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಮೈಲಾರಕ್ಕೆ ಹೋಗುತ್ತಾರೆ. ತುಂಗಭದ್ರಾ ನದಿ ದಡದಲ್ಲಿರುವ ಮೈಲಾರದಲ್ಲಿ ಮೊಕ್ಕಾಂ ಹೂಡಿ ಜಾತ್ರೆ ಮಾಡುತ್ತಾರೆ. ಜಾತ್ರೆಗೆ ಹೊರಟ ಭಕ್ತರ ಉತ್ಸಾಹದ ಫೋಟೊಗಳನ್ನು ಛಾಯಾಗ್ರಾಹಕ ಮಾಲತೇಶ ಇಚ್ಚಂಗಿ ಕ್ಲಿಕ್ಕಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.