ADVERTISEMENT

ವಿಜಯನಗರ | ಸಿಲಿಂಡರ್ ಸ್ಫೋಟ ಸ್ಥಳಕ್ಕೆ ಜಮೀರ್ ಭೇಟಿ; ಗಾಯಾಳುಗಳ ಆರೋಗ್ಯ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 7:54 IST
Last Updated 27 ಸೆಪ್ಟೆಂಬರ್ 2025, 7:54 IST
<div class="paragraphs"><p>ವಿಜಯನಗರ&nbsp;ಗಾದಿಗನೂರಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್</p></div>

ವಿಜಯನಗರ ಗಾದಿಗನೂರಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್

   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಗಾದಿಗನೂರಿನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಗಾಯಗೊಂಡವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತೋರಣಗಲ್‌ನ ಸಂಜೀವಿನಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಇಲ್ಲಿ ಜಿಲ್ಲಾ ನ್ಯಾಯಾಲಯ ಉದ್ಘಾಟನೆ ನಡೆದ ತಕ್ಚಣ ಗಾದಿಗನೂರಿಗೆ ತೆರಳಿದ ಅವರು ಘಟನೆ ನಡೆದ ಸ್ಥಳ ಪರಿಶೀಲಿಸಿದರು. ಬಳಿಕ ಆಸ್ಪತ್ರೆ ಗೆ ತೆರಳಿದರು.

ADVERTISEMENT

'ಸಿಲಿಂಡರ್ ಸ್ಪೋಟ ಘಟನೆ ನಡೆದಿದೆ, ಈ ಘಟನೆ ನಡೆಯಬಾರದಿತ್ತು. ಜಗತ್ತು ನೋಡದ ಎರಡು ವರ್ಷದ ಮಗು ಶೇ 70 ಗಾಯವಾಗಿದೆ, ನೋಡಿ ದು:ಖವಾಗಿದೆ . ಆ ಮಗು ತಂದೆ ಜೈಲಲ್ಲಿದ್ದಾರೆ ಎಂಬ ಮಾಹಿತಿ ಇದೆ. ಕೆಲವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿದೆ. ಬೆಂಗಳೂರಿನಿಂದ ವೈದ್ಯರು ಬರ್ತಾರೆ, ಕೆಲವರನ್ನು ಬೇರೆ, ಬೇರೆ ಕಡೆ ರೆಫರ್ ಮಾಡಲಾಗಿದೆ' ಎಂದು ಸಚಿವರು ಬಳಿಕ ಮಾಧ್ಯಮದವರಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.