ADVERTISEMENT

ವಿಜಯನಗರ | ಮೊಹರಂ ಸಂಭ್ರಮ, ಕತ್ತಲರಾತ್ರಿ ಸಂಪನ್ನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:24 IST
Last Updated 9 ಆಗಸ್ಟ್ 2022, 14:24 IST
ಮೊಹರಂ ಅಂಗವಾಗಿ ಹೊಸಪೇಟೆ ನಗರದಲ್ಲಿ ಸೋಮವಾರ ರಾತ್ರಿ ಪೀರಲ ದೇವರ ಮೆರವಣಿಗೆ ಜರುಗಿತು
ಮೊಹರಂ ಅಂಗವಾಗಿ ಹೊಸಪೇಟೆ ನಗರದಲ್ಲಿ ಸೋಮವಾರ ರಾತ್ರಿ ಪೀರಲ ದೇವರ ಮೆರವಣಿಗೆ ಜರುಗಿತು   

ಹೊಸಪೇಟೆ (ವಿಜಯನಗರ): ಮೊಹರಂ ಅಂಗವಾಗಿ ನಗರದ ವಿವಿಧೆಡೆ ಸೋಮವಾರ ಮಧ್ಯರಾತ್ರಿ ಕತ್ತಲರಾತ್ರಿ ಆಚರಿಸಲಾಯಿತು.

ನಗರದ ಭರಮಪ್ಪ-ರಾಮಲಿ ಸ್ವಾಮಿ, ಚಿತ್ತವಾಡ್ಗಿ, ಚಪ್ಪರದಹಳ್ಳಿ, ಕಾರಿಗನೂರು, ತಾಲ್ಲೂಕಿನ ಮಲಪನಗುಡಿ, ವಡ್ಡರಹಳ್ಳಿ, ಕಮಲಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಕೆಂಡ ತುಳಿಯುವ ಮೂಲಕ ಭಕ್ತರು ಹರಕೆ ತೀರಿಸಿದರು‌. ನಂತರ ಪೀರಲ ದೇವರನ್ನು ಹೊತ್ತು ನಗರದಲ್ಲಿ ಮೆರವಣಿಗೆ ಮಾಡುವ ಮೂಲಕ ಅನ್ಯ ಭಾಗದ ದೇವರುಗಳನ್ನು ಪರಸ್ಪರ ಭೇಟಿ ಮಾಡಿಸಲಾಯಿತು.

ಮಧ್ಯರಾತ್ರಿಯವರೆಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಎಚ್ಚರವಿದ್ದು, ಕೆಂಡ ತುಳಿಯುವ ಧಾರ್ಮಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಮಂಗಳವಾರ ಬೆಳಿಗ್ಗೆ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಬಂದು ಪೀರಲ ದೇವರ ದರ್ಶನ ಪಡೆದರು. ಹಿಂದೂ–ಮುಸ್ಲಿಮರು ಸೌಹಾರ್ದದಿಂದ ಹಬ್ಬ ಆಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.