ಹೊಸಪೇಟೆ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸುಮಾರು ಎರಡು ಗಂಟೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡು ಆತಂಕದ ಸ್ಥಿತಿ ನೆಲೆಸಿತ್ತು.
ವಿದ್ಯುತ್ ಜತೆಗೆ ಜನರೇಟರ್ ಸಹ ಕೈಕೊಟ್ಟ ಕಾರಣ ಭಾರಿ ಆತಂಕ ನೆಲೆಸಿತು. ಬಾಣಂತಿಯರು, ನವಜಾತ ಶಿಶುಗಳು, ಐಸಿಯುನಲ್ಲಿದ್ದ ಇದ್ದವರು ಪರದಾಡಿದರು.
‘ಸುಮಾರು ಒಂದೂವರೆ ತಾಸು ವಿದ್ಯುತ್ ಕೈಕೊಟ್ಟಿದ್ದು ನಿಜ, ನಾವು ಅಲ್ಲೇ ಇದ್ದೆವು. ವಿದ್ಯುತ್ ವೈಫಲ್ಯಕ್ಕೆ ಕಾರಣ ತಿಳಿಯಲು ಜೆಸ್ಕಾಂನವರೂ ಪ್ರಯತ್ನಪಟ್ಟರು. ಕೊನೆಗೆ ಬೇರೆ ಕಡೆಯಿಂದ ಜನರೇಟರ್ ಸಹ ತರಿಸಿದೆವು. ಇದೀಗ ಎಲ್ಲವೂ ಸರಿಯಾಗಿದೆ. ಬಾಣಂತಿಯರು, ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಡಿಎಚ್‌ಒ ಡಾ.ಎಲ್.ಆರ್.ಶಂಕರ್ ನಾಯ್ಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.