ADVERTISEMENT

ಪುಷ್ಕರಣಿಯಲ್ಲಿ ಮೀನುಗಳ ಸಾವುನೀರಿಗೆ ವಿಷ ಬೆರೆಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 11:56 IST
Last Updated 18 ಏಪ್ರಿಲ್ 2021, 11:56 IST
ಹಂಪಿ ಲೋಕಪಾವನಿ ಪುಷ್ಕರಣಿಯಲ್ಲಿನ ಮೀನುಗಳು ಸತ್ತು ಹೋಗಿರುವುದು
ಹಂಪಿ ಲೋಕಪಾವನಿ ಪುಷ್ಕರಣಿಯಲ್ಲಿನ ಮೀನುಗಳು ಸತ್ತು ಹೋಗಿರುವುದು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹಂಪಿ ವಿದ್ಯಾರಣ್ಯ ಮಠದ ಹಿಂಭಾಗದಲ್ಲಿರುವ ಲೋಕಪಾವನಿ ಪುಷ್ಕರಣಿಯಲ್ಲಿನ ಅನೇಕ ಮೀನುಗಳು ಭಾನುವಾರ ಸಾವಿಗೀಡಾಗಿವೆ.

‘ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿಯೇ ಪುಷ್ಕರಣಿಯಲ್ಲಿ ನೀರು ಬೆರೆಸಿದ್ದರಿಂದ ಮೀನುಗಳು ಸತ್ತು ಹೋಗಿವೆ. ಸಮೀಪದಲ್ಲಿಯೇ ಇರುವ ಬುಕ್‌ ಸ್ಟಾಲ್‌ನಲ್ಲಿ ಕಳ್ಳತನ ನಡೆದಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಎಂ. ವೆಂಕಪ್ಪ, ವೀರಸ್ವಾಮಿ, ಅಪ್ಪಾರಾವ ಹಂಪಿ ಪೊಲೀಸ್‌ ಠಾಣೆಗೆ ಕೊಟ್ಟಿರುವ ದೂರಿನಲ್ಲಿ ಆರೋಪಿಸಿದ್ದಾರೆ.

‘ಪುಷ್ಕರಣಿಯಲ್ಲಿ ಸುಮಾರು 200 ಮೀನುಗಳು ಸಾವನ್ನಪ್ಪಿರುವುದು ನಿಜ. ವಿಷ ಬೆರೆಸಿ ಕೊಲ್ಲಲಾಗಿದೆ ಎಂದು ಸ್ಥಳೀಯರು ದೂರು ಕೊಟ್ಟಿದ್ದಾರೆ. ತನಿಖೆಯ ನಂತರವೇ ವಾಸ್ತವಾಂಶ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.