
ಕೊಟ್ಟೂರು: ‘ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಹಾಗೂ ಜೋಳ ಖರೀದಿ ಮಾಡಲಾಗುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಎಪಿಎಂಸಿ ನಿರ್ದೇಶಕ ಶಾಂತನಹಳ್ಳಿ ಕೊಡದಪ್ಪ ಹೇಳಿದರು.
ತಾಲ್ಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಖರೀದಿ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸರ್ಕಾರದ ನಿಯಮದಂತೆ ರೈತರು ನೋಂದಣಿ ಮಾಡಿದ ರಸೀದಿಯೊಂದಿಗೆ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು’ ಎಂದರು.
‘ಖರೀದಿ ಕೇಂದ್ರದ ಅಧಿಕಾರಿ ಡಿ.ಕೆ. ಕಾವ್ಯ ಮಾತನಾಡಿ, ‘ಮಾರ್ಚ್ 31ರವರೆಗೆ ರಾಗಿ ಮತ್ತು ಜೋಳ ಖರೀದಿಗೆ ಅವಕಾಶ ಇದೆ. ಉಜ್ಜಯಿನಿ ವ್ಯಾಪ್ತಿಯಲ್ಲಿ 991 ರೈತರು ಹೆಸರು ನೋಂದಾಯಿಸಿದ್ದಾರೆ. 1 ಕ್ವಿಂಟಲ್ ರಾಗಿಗೆ ₹4,886, ಜೋಳಕ್ಕೆ ₹3,699 ದರ ನಿಗದಿ ಮಾಡಲಾಗಿದೆ’ ಎಂದು ತಿಳಿಸಿದರು.
ಬಿ.ಬಸಣ್ಣ, ಕಾನಾಹೊಸಹಳ್ಳಿ ಶೇಂಗಾ ಉತ್ಪಾದಕರ ಕಂಪನಿ ಅಧ್ಯಕ್ಷ ವಿಜಯಕುಮಾರಗೌಡ, ಉಪಾಧ್ಯಕ್ಷ ಟಿ. ಲೋಕೇಶ, ಬಿ.ಬಸಣ್ಣ, ಸಿದ್ದನಗೌಡ, ಹೊಸೂರಪ್ಪರ ಲೋಕೇಶ, ವಕೀಲ ಅಳವರ ಮರುಳಸಿದ್ದಪ್ಪ, ಎಸ್.ಸಿದ್ಧೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.