ಹರಪನಹಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮೋಡ ಮುಸುಕಿದ ವಾತಾವರಣದ ನಡುವೆ, ಜಿಟಿ ಜಿಟಿ ಮಳೆ ಸುರಿಯಿತು.
ಶಾಲಾ- ಕಾಲೇಜು ಆರಂಭ ಮತ್ತು ಬಿಡುವ ಸಮಯದಲ್ಲಿ ಮಳೆ ಸುರಿದಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು. ಜನರು ಮನೆಯಿಂದ ಹೊರಗೆ ಬರಲು ಹಿಂಜರಿದರು.
ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಶುರುವಾಯಿತು. ಕೃಷಿ ಚಟುವಟಿಕೆಗೆ ತೆರಳಿದ್ದ ರೈತರು, ಇತರೆ ಕೆಲಸಗಳಿಗೆ ಹೋಗಿದ್ದ ಕಾರ್ಮಿಕರು ಮಳೆಯಿಂದಾಗಿ ಮನೆಗಳಿಗೆ ಹಿಂತಿರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.