ADVERTISEMENT

ವಿಜಯನಗರ ಜಿಲ್ಲೆಯಲ್ಲಿ ವ್ಯಾಪಕ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 5:25 IST
Last Updated 25 ಮೇ 2024, 5:25 IST
<div class="paragraphs"><p>ಹಗರಿಬೊಮ್ಮನಹಳ್ಳಿಯ ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆ ನೀರಿನಿಂದ ಆವೃತವಾಗಿರುವುದು</p></div>

ಹಗರಿಬೊಮ್ಮನಹಳ್ಳಿಯ ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಮಳೆ ನೀರಿನಿಂದ ಆವೃತವಾಗಿರುವುದು

   

ಹೊಸಪೇಟೆ: ಹೊಸಪೇಟೆ ನಗರ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ಸಾಧಾರಣ ಮಳೆ ಸುರಿದಿದೆ. ಇದರಿಂದ ಎಲ್ಲೆಡೆ ಖುಷಿ ಆವರಿಸಿದೆ.

ಮಧ್ಯರಾತ್ರಿ 1 ಗಂಟೆ ವೇಳೆಗೆ ಗುಡುಗು ಸಹಿತ ಮಳೆ ಆರಂಭವಾಯಿತು. ಗಾಳಿಯ ರಭಸ ಇಲ್ಲದೆ, ನಿಧಾನವಾಗಿಯೇ ಸುರಿದ ಮಳೆ ಬೆಳಿಗ್ಗೆ 5 ಗಂಟೆಯವರೆಗೂ ಸುರಿಯಿತು. ಹೀಗಾಗಿ ಹೆಚ್ಚಿನ ಅನಾಹುತ ಆಗಲಿಲ್ಲ. 

ADVERTISEMENT

ಹೊಸಪೇಟೆ ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ನೆಮ್ಮದಿಯ ಅನುಭವ ಆಗುತ್ತಿದೆ.

ಹೊಸಪೇಟೆ ಪ್ರವಾಸಿ ಮಂದಿರ–1.62 ಸೆಂ.ಮೀ., ಟಿ.ಬಿ.ಡ್ಯಾಂ–1 ಸೆಂ.ಮೀ., ಗಾದಿಗನೂರು–4.82 ಸೆಂ.ಮೀ., ಕಮಲಾಪುರ 3.72 ಸೆಂ.ಮೀ., ಮರಿಯಮ್ಮನಹಳ್ಳಿ–2.10 ಸೆಂ.ಮೀ. ಮಳೆಯಾಗಿದೆ.

ಹರಪನಹಳ್ಳಿ– 3.2 ಸೆಂ.ಮೀ,  ಚಿಟಗೇರಿ–3.6 ಸೆಂ.ಮೀ.,ಅರಸೀಕೆರೆ– 2.5 ಸೆಂ.ಮೀ, ಹಿರೆಮೇಗಳಗೆರೆ–3.7 ಸೆಂ.ಮೀ, ಉಚ್ಚಂಗಿದುರ್ಗ– 5 ಸೆಂ.ಮೀ, ತೆಲಿಗಿ– 2.1 ಸೆಂ.ಮೀ, ಹಲುವಾಗಲು–2.6 ಸೆಂ.ಮೀ‌. ಮಳೆಯಾಗಿದೆ.

ಹಗರಿಬೊಮ್ಮನಹಳ್ಳಿ–2.56 ಸೆಂ.ಮೀ, ಹಂಪಸಾಗರ–2.2 ಸೆಂ.ಮೀ, ಮಾಲವಿ–2.54 ಸೆಂ.ಮೀ, ಮಳೆಯಾಗಿದೆ. ಹೂವಿನಹಡಗಲಿ– 2.10 ಸೆಂ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.