ಹರಪನಹಳ್ಳಿ: ತಾಲ್ಲೂಕಿನಲ್ಲಿ ಗುರುವಾರ ಜೋರಾದ ಮಳೆ ಸುರಿದಿದ್ದು, ಉಚ್ಚಂಗಿದುರ್ಗ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದ 13.6 ಸೆಂ.ಮೀ. ಮಳೆ ಸುರಿದಿದೆ.
ಚೆನ್ನಾಪುರ ತಾಂಡದಲ್ಲಿ ಸಾಕಿಬಾಯಿ, ಬೆಂಡಿಗೆರೆ ಸಣ್ಣತಾಂಡದಲ್ಲಿ ಲಕ್ಷ್ಮಿಬಾಯಿ, ಗೋಣೆಪ್ಪ, ಮುತ್ತಿಗಿಯಲ್ಲಿ ಕಾಳಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪುಣಬಗಟ್ಟಿ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು ರಸ್ತೆಗೆ ನೀರು ನುಗ್ಗಿದೆ, ಪುಣ್ಯದ ಮೂಲಕ ವ್ಯಾಪಕ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಅರಸೀಕೆರೆ 2 ಸೆಂ.ಮೀ, ಚಿಗಟೇರಿ 1.4, ಹಿರೆಮೇಗಳಗೆರೆ 3, ಉಚ್ಚಂಗಿದುರ್ಗ 13, ಹಲುವಾಗಲು 1.3 ಸೆಂ.ಮೀ. ನಷ್ಟು ಮಳೆ ಸುರಿದಿದೆ ಎಂದು ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.