ಮರಿಯಮ್ಮನಹಳ್ಳಿ: ಸಮೀಪದ ತಿಮ್ಮಲಾಪುರ ಗ್ರಾಮದ ಐತಿಹಾಸಿಕ ಪಾಳುಬಿದ್ದ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗೆ ಶಿವಲಿಂಗ ಕಿತ್ತು ಹಾಕಿ ಭಗ್ನಗೊಳಿಸಿರುವ ಘಟನೆ ನಡೆದಿದೆ.
ಕಳೆದ ಭಾನುವಾರ ಹುಣ್ಣಿಮೆ ದಿನ ರಾತ್ರಿ ಗ್ರಹಣ ಇದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ಪ್ರಾಚ್ಯವಸ್ತು ಇಲಾಖೆಗೆ ಒಳಪಟ್ಟಿರುವ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಮೂರು ಶಿವಲಿಂಗಗಳಿದ್ದು, 12 ವರ್ಷದ ಹಿಂದೆಯೂ ನಿಧಿ ಆಸೆಗೆ ಕಳ್ಳರು ಶಿವಲಿಂಗದ ಮೇಲಿನ ಗುಂಡನ್ನು ಕದ್ದೊಯ್ದಿದ್ದರು.
ಈಗ ದೇವಸ್ಥಾನದಲ್ಲಿನ ಶಿವಲಿಂಗ ಕಿತ್ತು ಭಗ್ನಗೊಳಿಸಿ, ಬುಡದಲ್ಲಿ ಕನಿಷ್ಠ ಅಡಿಗಳಷ್ಟು ಆಳ ಅಗೆದಿದ್ದಾರೆ. ಈ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆಗೆ ಒಳಪಟ್ಟಿದ್ದರೂ ನಿರ್ಲಕ್ಷ್ಯಗೊಳಗಾಗಿದೆ ಎಂದು ತಿಮ್ಮಲಾಪುರ ಗ್ರಾಮಸ್ಥರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.