ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ 114 ಡಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿಯನ್ನು ಶುಕ್ರವಾರವೇ ಅಮಾನತುಗೊಳಿಸುವುದಾಗಿ ಡಿಡಿಪಿಐ ಅವರು ತಹಶೀಲ್ದಾರ್ ಅವರಿಗೆ ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ಕೊನೆಗೊಳಿಸಿದರು.
ಬೆಳಿಗ್ಗೆ 11.30ರ ಸುಮಾರಿಗೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಎಂ.ಎಂ.ಶ್ರುತಿ ಅವರು ವಿದ್ಯಾರ್ಥಿಗಳು, ಪೋಷಕರ ಜತೆಗೆ ಚರ್ಚಿಸಿ, ಅವರ ಅಹವಾಲು ಆಲಿಸಿದರು. ತಕ್ಷಣ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಅವರ ಜತೆಗೆ ಫೋನ್‌ನಲ್ಲಿ ಮಾತನಾಡಿದರು.
‘ಊರವರು ದೂರು ನೀಡಿದ್ದಾರೆ, ಶುಕ್ರವಾರವೇ ಶಿಕ್ಷಕಿಯನ್ನು ಅಮಾನತುಗೊಳಿಸಲಾಗುವುದು’ ಎಂದು ಡಿಡಿಪಿಐ ಅವರು ತಹಶೀಲ್ದಾರ್ ಅವರಿಗೆ ಭರವಸೆ ನೀಡಿದರು.
ಬಳಿಕ ತಹಶೀಲ್ದಾರ್ ಅವರು ಎಲ್ಲರನ್ನೂ ಸಮಾಧಾನಪಡಿಸಿ, ತಾವೇ ದ್ವಾರದ ಬೀಗ ತೆಗೆದು ಎಲ್ಲರನ್ನೂ ಶಾಲಾ ಆವರಣದೊಳಕ್ಕೆ ಕಳುಹಿಸಿಕೊಟ್ಟರು. ಬಳಿಕ ಕೊಠಡಿ ಬಾಗಿಲು ತೆರೆದು ಎಂದಿನಂತೆ ತರಗತಿಗಳು ಆರಂಭವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.