ಹೊಸಪೇಟೆ (ವಿಜಯನಗರ-ಬಳ್ಳಾರಿ): ಇಲ್ಲಿಗೆ ಸಮೀಪದ ತುಂಗಭದ್ರಾ ಅಣೆಕಟ್ಟೆಯ 10 ಕ್ರಸ್ಟ್‌ಗೇಟ್‌ಳನ್ನು ತೆರೆಯುವ ಮೂಲಕ ಬುಧವಾರ ಬೆಳಿಗ್ಗೆ 11.15ರ ವೇಳೆಗೆ 20 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಹರಿಸಲು ಆರಂಭಿಸಲಾಗಿದೆ.
10.30 ರ ಬಳಿಕ ಒಂದೊಂದೇ ಗೇಟ್‌ಗಳನ್ನು ತೆರೆದು ನೀರು ಹೊರಬಿಡಲು ಆರಂಭಿಸಲಾಯಿತು. ಮೊದಲಿಗೆ 5 ಗೇಟ್ ತೆರೆದು, ಬಳಿಕ ಒಂದಿಟ್ಟು ಬಿಡುವು ನೀಡಿ ಮತ್ತೆ 5 ಗೇಟ್ ತೆರೆಯಲಾಯಿತು.
ಅಣೆಕಟ್ಟೆಯ ನೀರಿನ ಮಟ್ಟ ಬುಧವಾರ ಬೆಳಿಗ್ಗೆ 1,631.92 ಅಡಿ (ಗರಿಷ್ಠ 1,633 ಅಡಿ) ಇತ್ತು. 105.78 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 101.46 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಒಳಹರಿವಿನ ಪ್ರಮಾಣ 39,945 ಕ್ಯುಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 15,235 ಕ್ಯುಸೆಕ್ ಇತ್ತು. ಹೀಗಾಗಿ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 10 ಕ್ರಸ್ಟ್ ಗೇಟ್ ಗಳನ್ನು ತೆರೆದು ನೀರು ಹರಿಸಲು ತುಂಗಭದ್ರಾ ಮಂಡಳಿ ನಿರ್ಧರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.