ADVERTISEMENT

ತುಂಗಭದ್ರಾ ಅಣೆಕಟ್ಟೆ: ಜೂನ್‌ಗೆ ಮೊದಲು ಗೇಟ್‌ ಬದಲು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 17:40 IST
Last Updated 14 ಆಗಸ್ಟ್ 2025, 17:40 IST
ತುಂಗಭಧ್ರಾ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳು ಸಿದ್ಧವಾಗುತ್ತಿರುವ ಗದಗ ಸಮೀಪದ ಅಡವಿಸೋಮಾಪುರಕ್ಕೆ ಬುಧವಾರ  ತುಂಗಭದ್ರಾ ಮಂಡಳಿಯ ಅಧ್ಯಕ್ಷ ಎಸ್.ಎನ್.ಪಾಂಡೆ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದರು
–ಪ್ರಜಾವಾಣಿ ಚಿತ್ರ
ತುಂಗಭಧ್ರಾ ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳು ಸಿದ್ಧವಾಗುತ್ತಿರುವ ಗದಗ ಸಮೀಪದ ಅಡವಿಸೋಮಾಪುರಕ್ಕೆ ಬುಧವಾರ  ತುಂಗಭದ್ರಾ ಮಂಡಳಿಯ ಅಧ್ಯಕ್ಷ ಎಸ್.ಎನ್.ಪಾಂಡೆ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದರು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನು ಮುಂದಿನ ಜೂನ್‌ ತಿಂಗಳ ಒಳಗೆ ಬದಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ಗುತ್ತಿಗೆದಾರರಿಗೆ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಾಕೀತು ಮಾಡಿದರು.

ಸದ್ಯ ಗದಗ ಸಮೀಪದ ಅಡವಿಸೋಮಾಪುರದಲ್ಲಿ ನಡೆದಿರುವ ಗೇಟ್‌ಗಳ ನಿರ್ಮಾಣ ಕಾರ್ಯಕ್ಕೆ ಬುಧವಾರ ತುಂಗಭದ್ರಾ ಮಂಡಳಿಯ ಅಧ್ಯಕ್ಷ ಎಸ್.ಎನ್.ಪಾಂಡೆ, ಮುಖ್ಯ ಎಂಜಿನಿಯರ್‌ ಅಶೋಕ್ ಎಲ್. ವಾಸನದ್ ಮತ್ತು ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ಅವರು ಈ ಸೂಚನೆ ನೀಡಿದರು. 

ಕಳೆದ ವರ್ಷ ಆಗಸ್ಟ್ 10ರಂದು 19ನೇ ಕ್ರೆಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿತ್ತು. ಒಂದೇ ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಲಾಗಿತ್ತು. 72 ವರ್ಷಗಳಷ್ಟು ಹಳೆಯದಾದ ಅಣೆಕಟ್ಟೆಯ ಉಳಿದ ಎಲ್ಲಾ 32 ಗೇಟ್‌ಗಳನ್ನೂ ಬದಲಿಸಬೇಕು ಎಂದು ತಜ್ಞರು ಸೂಚಿಸಿದ್ದರು. ಆದರೆ ಪೂರಕ ಕಾರ್ಯಗಳು ನಡೆಯಲಿಲ್ಲ.

ADVERTISEMENT

ಈ ವರ್ಷ ಜೂನ್‌ 21ರಂದು 19ನೇ ಕ್ರಸ್ಟ್‌ಗೇಟ್ ಸಿದ್ಧಪಡಿಸಿ ಅಣೆಕಟ್ಟೆ ಸಮೀಪ ತರಲಾಯಿತು. ಆದರೆ,  ಜಲಾಶಯದಲ್ಲಿ ಅಧಿಕ ನೀರು ಸಂಗ್ರಹವಿದ್ದ ಕಾರಣ ಗೇಟ್ ಬದಲಾವಣೆ ಸಾಧ್ಯವಾಗಿರಲಿಲ್ಲ. ಮಳೆಗಾಲ ಮುಗಿದ ಬಳಿಕ, ಜಲಾಶಯ ನೀರಿನ ಸಂಗ್ರಹ 40 ಟಿಎಂಸಿ ಅಡಿಗೆ ಇಳಿದ ಬಳಿಕವಷ್ಟೇ (ನವೆಂಬರ್‌ ವೇಳೆಗೆ) ಗೇಟ್ ಬದಲಿಸುವ ಕಾರ್ಯ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.