
ಪ್ರಜಾವಾಣಿ ವಾರ್ತೆ
ಹೊಸಪೇಟೆ (): ‘ತುಂಗಭದ್ರಾ ಅಣೆಕಟ್ಟೆಯ 32 ಮತ್ತು 33ನೇ ಗೇಟ್‌ಗಳಿಗೆ ಹೊಸ ಕ್ರೆಸ್ಟ್‌ಗೇಟ್ ಅಳವಡಿಸಲಾಗಿದ್ದು, ಈವರೆಗೆ ಒಟ್ಟು ಐದು ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಸದ್ಯ ನಂ. 1, 4, 11, 17, 24, 26, 27 ಮತ್ತು 28ನೇ ಗೇಟ್‌ಗಳ (ಒಟ್ಟು 8) ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 23 ಗೇಟ್‌ಗಳ ರಚನೆ ಕಾರ್ಯವೂ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
‘ಗದಗ ಮತ್ತು ಹೊಸಪೇಟೆಯಲ್ಲಿ ತಲಾ ಒಂದೊಂದು ಗೇಟ್ ರಚನೆ ನಡೆದಿದೆ. ಹಳೆಯ 15 ಗೇಟ್‌ಗಳನ್ನು ತೆಗೆಯುವ ಕೆಲಸ ಮುಗಿದಿದ್ದು, ಇನ್ನೂ 5 ಗೇಟ್‌ಗಳನ್ನು ಕತ್ತರಿಸಿ ತೆಗೆಯಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.