ತುಂಗಭದ್ರಾ ಅಣೆಕಟ್ಟೆ -ಸಂಗ್ರಹ ಚಿತ್ರ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರೆಸ್ಟ್‌ಗೇಟ್ ನೀರಿನಲ್ಲಿ ಕೊಚ್ಚಿಹೋಗಿ ಭಾನುವಾರಕ್ಕೆ (ಆ. 10) 1 ವರ್ಷ. ಈವರೆಗೆ ಹೊಸ ಗೇಟ್ ಅಳವಡಿಸಲಾಗಿಲ್ಲ.
72 ವರ್ಷ ಹಳೆಯ ಅಣೆಕಟ್ಟೆಯ ಪೂರ್ಣ ಸಾಮರ್ಥ್ಯವಾದ 1,633 ಅಡಿಯಷ್ಟು ಮಟ್ಟಕ್ಕೆ ನೀರು ಸಂಗ್ರಹಿಸಿದ್ದ ದಿನವೇ (ಜಲಾಶಯದಲ್ಲಿ 105.78 ಟಿಎಂಸಿ ಅಡಿ) ಗೇಟ್ ಕೊಚ್ಚಿ ಹೋಗಿತ್ತು. ಬಳಿಕ ಒಂದು ವಾರದೊಳಗೆ ತಾತ್ಕಾಲಿಕ ಸ್ಟಾಪ್‌ಲಾಗ್ ಗೇಟ್ ಕೂರಿಸಿ ನೀರು ಪೋಲಾಗುವುದನ್ನು ತಪ್ಪಿಸಲಾಯಿತು. ಕಾಯಂ ಕ್ರೆಸ್ಟ್ ಗೇಟ್ ಈವರೆಗೆ ಅಳವಡಿಸಲಾಗಿಲ್ಲ.
‘ಮಳೆಗಾಲಕ್ಕೆ ಮೊದಲೇ ಗೇಟ್ ಕೂರಿಸಬೇಕಿತ್ತು. ಕ್ರೆಸ್ಟ್‌ಗೇಟ್ ನಿರ್ಮಾಣವಾಗದೆ, ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಿ ಇಡುತ್ತಿಲ್ಲ. ಈ ಬಾರಿ ಉತ್ತಮ ಮಳೆ ಆಗಿದ್ದರೂ, ಎರಡನೇ ಬೆಳೆಗೆ ನೀರು ಸಿಗುವುದು ಕಷ್ಟ’ ಎಂದು ರೈತ ಮುಖಂಡ ರುದ್ರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.