
ತುಂಗಭದ್ರಾ ಅಣೆಕಟ್ಟೆ ಬಳಿ ಕ್ರೆಸ್ಟ್ ಗೇಟ್‌ನ್ನು ಟ್ರಕ್‌ನಿಂದ ಇಳಿಸುತ್ತಿರುವುದು
ಪ್ರಜಾವಾಣಿ ಚಿತ್ರ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ ಬಹುನಿರೀಕ್ಷೆಯ ಗೇಟ್ ಬದಲಿಸುವ ಕೆಲಸಕ್ಕೆ ಶುಕ್ರವಾರದಿಂದ ಚಾಲನೆ ದೊರೆತಿದ್ದು, ಕವಚಗಳನ್ನು ತೆರವುಗೊಳಿಸುವುದು, ಕೆಲವು ಅನಗತ್ಯ ನಟ್ಟು, ಬೋಲ್ಡ್‌ಗಳನ್ನು ತೆರವುಗೊಳಿಸುವಂತಹ ಕೆಲಸಗಳು ಆರಂಭವಾಗಿವೆ.
ಸುಮಾರು ₹52 ಕೋಟಿ ವೆಚ್ಚದಲ್ಲಿ ಎಲ್ಲಾ 33 ಕ್ರೆಸ್ಟ್‌ಗೇಟ್‌ಗಳನ್ನು ತೆರವುಗೊಳಿಸಿ, ಹೊಸ ಗೇಟ್‌ಗಳನ್ನು ಅಳವಡಿಸುವ ಗುತ್ತಿಗೆಯನ್ನು ಗುಜರಾತ್ ಅಹಮದಾಬಾದ್ ಮೂಲದ ಹಾರ್ಡ್‌ವೇರ್ ಟೂಲ್ಸ್ ಆ್ಯಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿ ಪಡೆದುಕೊಂಡಿದೆ. ಕಂಪನಿಯ ಅಧಿಕಾರಿಗಳು, ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಅಣೆಕಟ್ಟೆಯಲ್ಲಿ ಪೂಜೆ ನೆರವೇರಿಸಿದರು.
15 ಗೇಟ್ ಸಿದ್ಧ: ಕಳೆದ ಜೂನ್ 21ರಂದು ಒಂದು ಕ್ರೆಸ್ಟ್‌ಗೇಟ್ ಸಿದ್ಧವಾಗಿ ಅಣೆಕಟ್ಟೆ ಸಮೀಪಕ್ಕೆ ಬಂದಿತ್ತು. ಆದರೆ ಆ ಹಂತದಲ್ಲಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಆರಂಭವಾದ ಕಾರಣ ಗೇಟ್ ಅಳವಡಿಕೆ ಅಸಾಧ್ಯವಾಗಿತ್ತು. ಇದೀಗ ಒಟ್ಟು 15 ಗೇಟ್‌ಗಳು ಸಿದ್ಧವಾಗಿದ್ದು, ಇನ್ನು ಮೂರರಿಂದ ನಾಲ್ಕು ತಿಂಗಳ ಒಳಗೆ ಎಲ್ಲಾ 33 ಗೇಟ್‌ಗಳು ಸಿದ್ಧವಾಗುವ ವಿಶ್ವಾಸವನ್ನು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಒಂದು ಹಳೆಯ ಗೇಟ್ ತೆರವುಗೊಳಿಸಲು 7 ದಿನ, ಅದೇ ಜಾಗದಲ್ಲಿ ಹೊಸ ಗೇಟ್ ಅಳವಡಿಕೆಗೆ 7 ದಿನ, ಹೀಗೆ ಒಟ್ಟು 14 ದಿನದಲ್ಲಿ ಒಂದು ಗೇಟ್ ಪೂರ್ಣ ಪ್ರಮಾಣದಲ್ಲಿ ಅಳವಡಿಕೆಯಾಗಲಿದೆ. ಹೀಗಾಗಿ ಸುಮಾರು ಆರು ತಿಂಗಳ ಒಳಗಾಗಿ ಎಲ್ಲಾ ಗೇಟ್‌ಗಳನ್ನು ಬದಲಿಸುವ ವಿಶ್ವಾಸ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುಂಗಭದ್ರಾ ಅಣೆಕಟ್ಟೆಯ ಮೇಲ್ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಗುತ್ತಿಗೆ ಕಂಪನಿಯವರು ಪೂಜೆಯಲ್ಲಿ ತೊಡಗಿದ್ದಾಗ ಪ್ರವಾಸಿಗರು ಜಲಾಶಯ ನೋಡಲು ಬರುತ್ತಲೇ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.