ADVERTISEMENT

ನೀರೂ ಹರಿಸಿ, ಗೇಟನ್ನೂ ಅಳವಡಿಸಿ: ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 18:58 IST
Last Updated 17 ನವೆಂಬರ್ 2025, 18:58 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ಮಾರ್ಚ್‌ವರೆಗೆ ಎರಡನೇ ಬೆಳೆಗೆ ನೀರು ಹರಿಸಬೇಕು, ಜಲಾಶಯಕ್ಕೆ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಕೈಗೊಂಡಿದ್ದ ಆರು ದಿನಗಳ ಪಾದಯಾತ್ರೆ ಸೋಮವಾರ ಇಲ್ಲಿನ ತುಂಗಭದ್ರಾ ಮಂಡಳಿ ಕಚೇರಿ ಎದುರು ಪ್ರತಿಭಟನೆಯೊಂದಿಗೆ ಕೊನೆಗೊಂಡಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸಂಘಟನೆ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪದ ಕರೂರಿನಿಂದ ನವೆಂಬರ್ 12ರಂದು ಪಾದಯಾತ್ರೆ ಆರಂಭಗೊಂಡಿತ್ತು. ರೈತರು ಪ್ರತಿ ದಿನ 20 ಕಿ.ಮೀ. ಕ್ರಮಿಸಿದರು. ‘ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಮಂಡಳಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತೇವೆ’ ಎಂಬ ಎಚ್ಚರಿಕೆ ನೀಡಿದರು.

ರೈತರ ಮನವಿ ಸ್ವೀಕರಿಸಿದ ಮಂಡಳಿಯ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ, ‘ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ರೈತ ಮುಖಂಡರಾದ ಕರೂರು ಆರ್.ಮಾಧವ ರೆಡ್ಡಿ, ಜಾಗನೂರು ಮಲ್ಲಿಕಾರ್ಜುನ ರೆಡ್ಡಿ, ಜೆ.ಎನ್‌.ಕಾಳಿದಾಸ, ಬಸವರಾಜಸ್ವಾಮಿ, ಲೇಪಾಕ್ಷಿ, ಪಂಪನಗೌಡ, ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ, ಜನ ಸಂಗ್ರಾಮ ಪರಿಷತ್‌ನ ಶ್ರೀಶೈಲ ಆಲ್ದಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.