ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಹೋಬಳಿಯ ಸೀತಾರಾಮ ತಾಂಡಾದ ನಿವಾಸಿ, ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಗುರುಪ್ರಸಾದ್ (30) ಅವರ ಶವ ಕಮಲಾಪುರದ ಎಲ್‌ಎಲ್‌ಸಿ ಕಾಲುವೆಯ ಎಚ್‌ಪಿಸಿ ಸೇತುವೆ ಬಳಿ ಮಂಗಳವಾರ ಪತ್ತೆಯಾಗಿದ್ದು, ಆತನ ಸಾವಿನ ಕುರಿತಂತೆ ತಂದೆ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗುರುಪ್ರಸಾದ್ ಅವರ ತಂದೆ ಎಲ್.ಕೃಷ್ಣ ನಾಯ್ಕ್ ಅವರು ಕಮಲಾಪುರ ಠಾಣೆಗೆ ದೂರು ನೀಡಿದ್ದು, ಏಪ್ರಿಲ್ 14ರಂದು ಬೆಳಿಗ್ಗೆ 10.30ರ ವೇಳೆಗೆ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ, ಸಾವಿನ ಬಗ್ಗೆ ಸಂಶಯವಿದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
14ರಂದು ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಇದೇ ಯುವಕ ಕುಣಿದು ಕುಪ್ಪಳಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
‘ಮೃತದೇಹದ ಕೆಲವು ಭಾಗಗಳನ್ನು ಎಫ್ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ, ಅದುವರೆಗೆ ಏನೂ ಹೇಳಲಾಗದು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.