ADVERTISEMENT

ಹೊಸಪೇಟೆ | ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿ ಅಹ್ವಾನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:27 IST
Last Updated 19 ಜುಲೈ 2025, 7:27 IST

ಹೊಸಪೇಟೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಿಂದ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಆರ್‌ಎಸ್‌ಇಟಿಐ ನಿರ್ದೇಶಕ ಗಿರಿಧರ್ ತಿಳಿಸಿದ್ದಾರೆ.

ವಯೋಮಿತಿ 18 ರಿಂದ 45 ವರ್ಷದೊಳಗಿದ್ದು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅಗತ್ಯದ ದಾಖಲೆಗಳೊಂದಿಗೆ ನಿರ್ದೇಶಕರ ಕಚೇರಿ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣ, ಪೈ ಹೋಟೆಲ್ ಎದುರುಗಡೆ, ಬಸ್‌ಸ್ಟಾಂಡ್ ಹತ್ತಿರ, ಹೊಸಪೇಟೆ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಆಸಕ್ತ ಅರ್ಹರು ಜುಲೈ 21ರಂದು ಸಂದರ್ಶನಕ್ಕೆ ಭಾಗವಹಿಸಬೇಕು. 22ರಂದು ತರಬೇತಿ ಪ್ರಾರಂಭವಾಗಲಿವೆ. ಮಾಹಿತಿಗೆ 9741987137, 8105001594 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT