ADVERTISEMENT

Video: ವಿಜಯನಗರ ದಸರಾ: ದೇವಿಯೇ ಬರುವಳು ಏಳು ಕೇರಿಗೆ!

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:45 IST
Last Updated 30 ಸೆಪ್ಟೆಂಬರ್ 2022, 16:45 IST

ವಿಜಯನಗರ ಅರಸರ ಕಾಲದಲ್ಲೂ ಅಸ್ಪೃಶ್ಯತೆಯಂತಹ ಅಮಾನುಷ ಪದ್ಧತಿ ಆಚರಣೆಯಲ್ಲಿತ್ತು. ಅದನ್ನು ಸಹಿಸಿಕೊಳ್ಳದೇ ಅದರ ವಿರುದ್ಧ ಸೆಟೆದದ್ದು ತಮ್ಮದೇ ಸ್ವಾಭಿಮಾನದ ಸಂಪ್ರದಾಯ ಕಟ್ಟಿಕೊಂಡು, ಇಂದಿಗೂ ಆಚರಿಸುತ್ತಿರುವವರು ಹೊಸಪೇಟೆಯ ಏಳು ಕೇರಿ ವಾಲ್ಮೀಕಿ ನಾಯಕ ಸಮಾಜದವರು. ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ಏಳು ಸಾವಿರ ಬೇಡ ನಾಯಕರ ಬಲಿಷ್ಠ ಪಡೆ ಇತ್ತು. ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಈ ಪಡೆ ಏಳು ಕೇರಿಗಳಿಗೆ ಸೀಮಿತವಾಯಿತು. ಅವುಗಳೇ ಇಂದಿನ ಏಳು ಕೇರಿಗಳು. ನಾಯಕರಿಗೆ ಈ ನವರಾತ್ರಿ ಆಚರಣೆಯೇ ಎಲ್ಲಕ್ಕಿಂತ ದೊಡ್ಡ ಹಬ್ಬ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT