ಹೊಸಪೇಟೆ (ವಿಜಯನಗರ): ಅಂತರರಾಷ್ಟ್ರಿಯ ಯೋಗ ದಿನದ ಪ್ರಯುಕ್ತ ನಗರದ ವಿವಧೆಡೆ, ವಿವಿಧ ಕಾಲೇಜು, ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಾಮೂಹಿಕ ಯೋಗ ಶಿಬಿರಗಳು ನಡೆದವು.
ನಗರದ ಏಕೈಕ ಎಂಜಿನಿಯರಿಂಗ್ ಕಾಲೇಜ್ ಎಂಬ ಹೆಗ್ಗಳಿಕೆಯ ಪಿಡಿಐಟಿ ಕಾಲೇಜ್‌ನಲ್ಲಿ ನಡೆದ ಯೋಗ ಶಿಬಿರವನ್ನು ಉಪ ಪ್ರಾಂಶುಪಾಲೆ ಪ್ರೊ.ಪಾರ್ವತಿ ಕಡ್ಲಿ ಉದ್ಘಾಟಿಸಿದರು. ‘ಎಂಜಿನಿಯರ್‌ಗಳು ತಮ್ಮ ಕೆಲಸದ ಒತ್ತಡವನ್ನು ನಿಭಾಯಿಸಲು ಯೋಗವು ಸಹಕಾರಿಯಾಗಲಿದೆ’ ಎಂದು ಅವರು ಹೇಳಿದರು.
ಯೋಗ ಶಿಕ್ಷಕರಾಗಿ ಮೋಟ್ಲಾ ನಾಯ್ಕ್, ನೂರ್‌ಜಾನ್ ರಾಜಭಕ್ಷಿ, ಬಸಣ್ಣ ಜಿ. ಹಾಗೂ ರವೀಂದ್ರ ರೆಡ್ಡಿ ಅವರು ಮಾರ್ಗದರ್ಶನ ನೀಡಿದರು.
ಗಾದಿಗನೂರು: ತಾಲ್ಲೂಕಿನ ಗಾದಿಗನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಯೋಗ ಶಿಬಿರದಲ್ಲಿ ಪಾಲ್ಗೊಂಡರು. ಪಿಡಿಒ ಪೂರ್ಣ ತೇಜ, ಶಾಲೆಯ ಶಿಕ್ಷಕ ವೃಂದದವರು, ಪಂಚಾಯಿತಿ ಸಿಬ್ಬಂದಿ, ಪಂಚಾಯತಿ ಗ್ರಂಥಾಲಯ ಗ್ರಂಥಪಾಲಕ ಕೆ.ಕಲ್ಲಪ್ಪ ಇತರರೂ ಯೋಗಾಸನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.