
ಪ್ರಜಾವಾಣಿ ವಾರ್ತೆಹೊಸಪೇಟೆ: ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್–ವ್ಯಾಸ) ವತಿಯಿಂದ ಯೋಗ ಶಿಕ್ಷಕ ಕೋರ್ಸ್ (ವೈಐಸಿ) ಮಾಡುವುದಕ್ಕೆ ಹೊಸಪೇಟೆ ನಗರದಲ್ಲೇ ಇದೀಗ ಅವಕಾಶ ದೊರೆತಿದ್ದು, 300 ಗಂಟೆಗಳ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ.
‘ಆನ್‌ಲೈನ್ ಅಥವಾ ಆಫ್‌ಲೈನ್ ಎರಡೂ ಬಗೆಯಲ್ಲಿ ಕೋರ್ಸ್ ನಡೆಯಲಿದೆ. ವಾರಾಂತ್ಯಗಳಲ್ಲಿ ಪ್ರಾಯೋಗಿಕ ತರಬೇತಿಯೂ ಇದೆ. ‘ಎಸ್‌ವ್ಯಾಸ’ದಲ್ಲಿ ದೀರ್ಘಾವಧಿ ವ್ಯಾಸಂಗ ಮಾಡುವುದಾದರೆ ಈ ಕೋರ್ಸ್ ಮಾಡಬೇಕಿರುವುದು ಕಡ್ಡಾಯವಾಗಿರುವುದಕ್ಕೆ ಇದೊಂದು ಉತ್ತಮ ಅವಕಾಶವಾಗಿದೆ’ ಎಂದು ಸಂಚಾಲಕಿ ನೇತ್ರಾವತಿ ಡಿ. ತಿಳಿಸಿದ್ದಾರೆ.
ಮಾಹಿತಿಗೆ 90367 56536, 94837 14371 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.