ADVERTISEMENT

ಯುವಜನ ಸಬಲೀಕರಣ ನಿಗಮಕ್ಕೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 14:59 IST
Last Updated 22 ಫೆಬ್ರುವರಿ 2021, 14:59 IST
ಯುವಧ್ವನಿ ಹಾಗೂ ಯುವಜನ ಒಕ್ಕೂಟದ ಸದಸ್ಯರು ಸೋಮವಾರ ಹೊಸಪೇಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಾಗೃತಿ ಮೂಡಿಸಿದರು
ಯುವಧ್ವನಿ ಹಾಗೂ ಯುವಜನ ಒಕ್ಕೂಟದ ಸದಸ್ಯರು ಸೋಮವಾರ ಹೊಸಪೇಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಾಗೃತಿ ಮೂಡಿಸಿದರು   

ವಿಜಯನಗರ (ಹೊಸಪೇಟೆ): ಯುವಧ್ವನಿ ಹಾಗೂ ಯುವಜನ ಒಕ್ಕೂಟದ ವತಿಯಿಂದ ನಗರದ ವಿವಿಧ ಕಾಲೇಜುಗಳಲ್ಲಿ ಸೋಮವಾರ ಯುವಜನ ಸಬಲೀಕರಣ ನಿಗಮ ಸ್ಥಾಪನೆ ವಿಷಯವಾಗಿ ಜಾಗೃತಿ ಶಿಬಿರ ನಡೆಸಲಾಯಿತು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಮುನ್ಸಿಪಲ್ ಕಾಲೇಜಿನಲ್ಲಿ ಶಿಬಿರ ನಡೆಯಿತು. ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದ ಯುವಜನತೆಯನ್ನು ಸಮರ್ಥರನ್ನಾಗಿಲು ಕೌಶಲ ತರಬೇತಿ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಯುವಜನ ಸಬಲೀಕರಣ ನಿಗಮದ ಅವಶ್ಯಕತೆ ಕುರಿತು ಯುವಧ್ವನಿ ಸದಸ್ಯರು ಮಾಹಿತಿ ನೀಡಿದರು.

ಯುವಜನರ ಹಕ್ಕುಗಳು, ಸಮಸ್ಯೆ ಮತ್ತು ಸವಾಲುಗಳ ಕುರಿತಂತೆ ಯುವಧ್ವನಿಯ ಸದಸ್ಯರಾದ ಸುನಿತಾ, ಶಕೀಲ್ ಮತ್ತು ಪರಶುರಾಮ ಜಾಗೃತಿ ಮೂಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.