ADVERTISEMENT

ಅ.ಸಂಗಾಪುರ: ಬಸ್ ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:01 IST
Last Updated 17 ಜುಲೈ 2013, 6:01 IST

ವಿಜಾಪುರ: ತಾಲ್ಲೂಕಿನ ಅಡವಿ ಸಂಗಾಪುರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅಲ್ಲಿಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಎರಡು ತಿಂಗಳಿನಿಂದ ಬಸ್ ಸೇವೆ ಸ್ಥಗಿತಗೊಂಡಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಜಾಪುರಕ್ಕೆ ವ್ಯಾಸಂಗಕ್ಕೆ ನಿತ್ಯ ಬರುತ್ತಿದ್ದು, ತಮಗೆಲ್ಲ ತೊಂದರೆಯಾಗಿದೆ. ತಕ್ಷಣವೇ ಬಸ್ ಸೇವೆ ಆರಂಭಿಸಬೇಕು ಎಂದು ಕೋರಿ ದರು.

ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ಬಡ ರೋಗಿಗಳು, ವಯೋವೃ ದ್ಧರಿಗೆ ತೀವ್ರ ತೊಂದರೆಯಾಗುತ್ತಿದೆ. ಶಾಲಾ-ಕಾಲೇಜು ಅವಧಿಯಲ್ಲಿ ಮತ್ತು ಮಧ್ಯಾಹ್ನ-ಸಂಜೆ ಬಸ್ ಸಂಚಾರ ಆರಂಭಿಸಬೇಕು ಎಂದು ಅರುಣ ವಿ. ಕೋಟ್ಯಾಳ, ಮಹಾದೇವ ಕೋಟ್ಯಾಳ, ಸುಧೀರ ಕುಲಕರ್ಣಿ, ಶಂಕರ ಭೀ. ಕೊಟ್ಯಾಳ ಮನವಿ ಸಲ್ಲಿಸಿದರು.

ಅನಿತಾ ಗೆಣ್ಣೂರ, ಶೈಲಾ ವಾಡೆದ, ಆರತಿ, ಮೊಹ್ಸಿನ್ ಮೊಕಾಶಿ, ರವಿ, ಶಿವಾನಂದ ಹಾಜರಿದ್ದರು. ಸೀಮೆ ಎಣ್ಣೆ ಬಿಡುಗಡೆ: ವಿಜಾಪುರ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಅಲ ಸಂಪರ್ಕ ಹೊಂದಿರದ ಕಾಯಂ ಪಡಿತರ ಚೀಟಿ ಹೊಂದಿರು ವವರಿಗೆ ಪ್ರಸಕ್ತ ಜುಲೈ ತಿಂಗಳ ಸೀಮೆ ಎಣ್ಣೆ ಬಿಡುಗಡೆ ಮಾಡಲಾಗಿದೆ.

ಗ್ಯಾಸ್ ಸಂಪರ್ಕ ಪಡೆಯದ ನಗರ ಹಾಗೂ ಗ್ರಾಮೀಣ ಪ್ರದೇಶದ ಪಡಿತರ ಚೀಟಿಗಳಿಗೆ ತಲಾ 5 ಲೀಟರ್  ಸೀಮೆ ಎಣ್ಣೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.