ADVERTISEMENT

ಆಲಮಟ್ಟಿಯಲ್ಲಿ ಎಂಜಿನಿಯರ್ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:10 IST
Last Updated 21 ಸೆಪ್ಟೆಂಬರ್ 2011, 6:10 IST

ಆಲಮಟ್ಟಿ: ಜಾಗತೀಕರಣದ ಫಲವಾಗಿ ಬಹುತೇಕ ಎಂಜಿನಿಯರ್‌ಗಳು ನಾನಾ ವಿಧವಾದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಹೊರಕ್ಕೆ ಬಂದು, ಅಂಥ  ಎಂಜಿನಿಯರ್‌ಗಳಿಗೆ ಸೂಕ್ತ ಪ್ರೋತ್ಸಾಹ, ಪೂರಕ ವಾತಾವರಣ ದೊರಕಿದರೆ ಎಂಜಿನಿ ರಿಂಗ್ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬಹುದು ಅದಕ್ಕೆ ಮೇಲಾಧಿ ಕಾರಿಗಳ ಪ್ರೋತ್ಸಾಹ ನೀಡಬೇಕಾಗಿದೆ. ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧೀಕ್ಷಕ ಎಂಜಿನಿಯರ್ ಎಸ್.ಬಿ. ಬಿಸಲಾಪೂರ ಹೇಳಿದರು.

ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಆಲಮಟ್ಟಿ ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ನಿಗಮದಲ್ಲಿ  ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ  ಆಚರಿಸಲಾದ `ಎಂಜಿನಿಯರ್‌ಗಳ ದಿನಾಚರಣೆ~ಯ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು.

ಇಲ್ಲಿಯವರೆಗೆ ನಾವು ಎಂಜಿನಿಯ ರಿಂಗ್ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಏನು? ಎಂಬುದರ ಕುರಿತು ಸ್ವಯಂ ಮೌಲ್ಯಮಾಪನ ಮಾಡಿಕೊಂಡು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾ ಗಿದೆ, ಎಂಜಿನಿಯರ್‌ಗಳಲ್ಲಿ ಉಂಟಾಗಿರುವ ಕೌಶಲ್ಯದ ಕೊರತೆಯನ್ನು ನೀಗಿಸಬೇಕಾ ಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರವಿ ಕೃಷ್ಣರೆಡ್ಡಿ, `ವಿಶ್ವೇಶ್ವರಯ್ಯನವರು ಎಂಜಿನಿಯರಿಂಗ್ ವಿಭಾಗದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರ ಪರಿಣಾ ಮವಾಗಿ ಎಂಜಿನಿಯರ್‌ಗಳನ್ನು ಸದಾ ಕಾಲ ಗೌರವಿಸುವ ಭಾವನೆ ಸಮಾಜ ದಲ್ಲಿ ಮೂಡಿದೆ, ಎಂಜಿನಿಯರ್‌ಗಳು ಯಾವಾಗಲೂ ಧನಾತ್ಮಕ ಚಿಂತನೆ ಯೊಂದಿಗೆ ಕಾರ್ಯನಿರ್ವಹಿಸಬೇಕಾ ಗಿದೆ~ ಎಂದರು.

ಕಾರ್ಯಪಾಲಕ ಎಂಜಿನಿಯರ್‌ಗಳಾದ ಎಸ್.ವಿ. ಸಂಗಟಿ, ಪಿ.ಎಂ. ದೇಶ ಪಾಂಡೆ, ರಾಜವರ್ಧನ, ಡಿಪ್ಲೊಮಾ ಇಂಜಿನಿಯರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಎಸ್.ಜಿ. ಪಟ್ಟಣಶೆಟ್ಟಿ ಮೊದಲಾದವರಿದ್ದರು.

ಎಸ್.ಎ. ತಬಸ್ಸಂ ಸ್ವಾಗತಿಸಿದರು. ಆರ್.ಬಿ. ಸಂಕ್ರಿ ನಿರೂಪಿಸಿದರು. ಸಂತೋಷ ಯಳಸಂಗಿ ವಂದಿಸಿದರು.
ಗೀತಾ ಪವಾರ, ಕಾರ್ಮಿಕ ಮುಖಂಡ ಎಸ್.ಎಂ ಸಣ್ಣಕ್ಕಿ, ಎ.ಎಂ. ಅಂಬಿ ಮೊದಲಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.