ADVERTISEMENT

ಉಡಾನ್‌: ಸೊಲ್ಲಾಪುರಕ್ಕೆ ವಿಮಾನ ಸೇವೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 11:27 IST
Last Updated 11 ಏಪ್ರಿಲ್ 2017, 11:27 IST

ಸೊಲ್ಲಾಪುರ: ಕೇಂದ್ರ ಸರ್ಕಾರದ ಉಡಾನ ಯೋಜನೆ ಸೊಲ್ಲಾಪುರ ಸೇರಿದಂತೆ ಐದು ನಗರಗಳನ್ನು ಜೋಡಿಸುವ ಅಗ್ಗದ ವಿಮಾನ ಸೇವೆ ಬರುವ ಸೆಪ್ಟೆಂಬರನಲ್ಲಿ ಆರಂಭವಾಗಲಿದೆ ಎಂದು ಸೊಲ್ಲಾಪುರದ ಸಂಸದ ಶರದ ಬನಸೋಡೆ ತಿಳಿಸಿದ್ದಾರೆ.

ಪ್ರವಾಸಿಗರ ಕೊರತೆಯಿಂದ ಕೆಲವು ವರ್ಷಗಳ ಹಿಂದೆ ನಿಂತು ಹೊಗಿದ್ದ ವಿಮಾನ ನಿಲ್ದಾಣ ಪುನಃ ತನ್ನ ಸೇವೆ ಆರಂಭಿಸಲಿದೆ. ಈ ವಿಮಾನ ಸೇವೆ ಸೊಲ್ಲಾಪುರ- ಮುಂಬೈ ನಡುವಿನ ಅಂತರ ಕಡಿಮೆಯಾಗಲಿದೆ. ಕೇವಲ ಒಂದು ಗಂಟೆಯಲ್ಲಿ ಮುಂಬೈ ತಲುಪಬಹುದಾಗಿದೆ. ದ್ರಾಕ್ಷಿ, ದಾಳಿಂಬೆ, ಬಾರೆಕಾಯಿ, ಟ್ಯಾವೆಲ್, ಚಾದರ್ ಮುಂತಾದ ವ್ಯಾಪಾರಿಗಳಿಗೆ ಅನಕೂಲವಾಗಲಿದ್ದು ಸೊಲ್ಲಾಪುರ ಮತ್ತು ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಪ್ರವಾಸೊದ್ಯಮಕ್ಕೆ ಚಾಲನೆ ದೊರಕಲಿದೆ.

ಈ ಕುರಿತು ಚೆಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ರಾಜು ರಾಠಿ ಅವರು ಮಾತನಾಡಿ ‘ಕೇಂದ್ರ ಸರಕಾರ ಸಚಿವ ಅಶೋಕ ಗಜಪತಿರಾಜು ಅವರಿಗೆ ವಿಮಾನ ಸೇವೆ ಆರಂಭಿಸುವ ಕುರಿತು ಮನವಿ ಸಲ್ಲಿಸಿದ ಪ್ರಯತ್ನದ ಫಲವಾಗಿ ಇಂದು ಯಶ್ಸು ದೊರಕಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.