ADVERTISEMENT

ಎರಡು ದಿನ ಭರಪೂರ ಸಾಂಸ್ಕೃತಿಕ ಕಲರವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:24 IST
Last Updated 1 ಮಾರ್ಚ್ 2014, 5:24 IST

ಆಲಮೇಲ: ಮಾರ್ಚ್ 2 ಮತ್ತು 3ರಂದು ನಡೆಯುವ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸಜ್ಜಾಗಿವೆ.

ಭಾನುವಾರದ ಕಾರ್ಯಕ್ರಮಗಳನ್ನು ಮಹಿಳಾ ವಿಶ್ವವಿದ್ಯಾಲಯದ ಡಾ. ಎಂ.ಬಿ.ದಿಲ್‌ಶಾದ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿ.ಪಂ ಮಾಜಿ ಉಪಾಧ್ಯಕ್ಷ ಸಿದ್ಧರಾಮ ಪಾಟೀಲ ವಹಿಸುವರು. ಕಿರುತೆರೆ ಕಲಾವಿದ ಸಂಗಮೇಶ ಉಪಾಸೆ ಮುಖ್ಯ ಅತಿಥಿ ಗಳಾಗಿ ಆಗಮಿಸುವರು. ಗೋಳಾ ಸಾರದ ಶ್ರೀಗಳು ಸಾನಿಧ್ಯ ವಹಿಸುವರು.

ಮೊದಲ ದಿನ 41ವಿವಿಧ ಕಲಾ ತಂಡಗಳು, ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಚಲನಚಿತ್ರನಟಿ ರೂಪಿಕಾ ತಂಡದಿಂದ ನೃತ್ಯ, ಬೆಂಗಳೂರಿನ ಕರ್ನಾಟಕ ಕಲಾ ವೈಭವ ತಂಡದಿಂದ ಕನ್ನಡ ಗೀತೆಗಳು, ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ಹಾಸ್ಯ ಕಾರ್ಯಕ್ರಮ, ಸಂಗೀತ ಅಕಾಡೆಮಿ ಸದಸ್ಯ ಬಸವರಾಜ ಭಂಟನೂರ ಅವರಿಂದ ಸುಗಮಸಂಗೀತ, ಮಹಾಲಿಂಗಪೂರದ ಪ್ರಕಾಶ ಹುಣಶ್ಯಾಳ ಅವರಿಂದ ಕರಡಿ ಕಜಲು, ವಿಜಾಪುರದ ವಿರೇಶ ತಂಡದವರಿಂದ ಭಾವಗೀತೆ, ಶ್ರೀಕಾಂತ ಕ್ವಾಟಿ ಅವರಿಂದ ಕವ್ವಾಲಿ, ಅಶೋಕ ನೆಲ್ಲಗಿ ಗೀತ ಕುಂಚ, ಚಿತ್ತಾಪೂರದ ಮಲ್ಲಿಕಾರ್ಜುನ ಶಾಸ್ತ್ರೀ ಅವರಿಂದ ಕರಪಾಲ ಮೇಳ, ಬಸವೇಶ್ವರ ಬಯಲಾಟ ಮಂಡಳಿಯಿಂದ ಕೀಚಕನ ವಧೆ, ರಾವುತ ತಳಕೇರಿ ಕ್ರಾಂತಿಗೀತೆ, ರಮ್ಯಾ ಕುಲಕರ್ಣಿ ಶಾಸ್ತ್ರೀಯ ಸಂಗೀತ, ಧಾರವಾಡದ ನಾಗರತ್ನಮ್ಮ ಜಾನಪದ ನೃತ್ಯ, ಸೇರಿದಂತೆ ಪಟ್ಟಣದ ವಿವಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ರಾತ್ರಿ 7 ಗಂಟೆಯಿಂದ ಬೆಳಗಿನ 4.30 ಗಂಟೆಯ ವರೆಗೂ ಕಾರ್ಯಕ್ರಮಗಳು  ನಡೆಯಲಿವೆ.

ಮಾರ್ಚ್ 3ರಂದು 7 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಲರವ ಉದ್ಘಾಟನೆಯನ್ನು ಮಾಜಿ ಸಚಿವ ಎಂ.ಸಿ. ಮನಗೂಳಿ ನೆರವೇರಿಸುವರು. ಹಾಸಿಂ ಪೀರ್ ವಾಲಿಕಾರ ಅಧ್ಯಕ್ಷತೆ ವಹಿಸುವರು. ಆಸಂಗಿಹಾಳ ಶ್ರೀಗಳು, ಬೋರಗಿ ಮಠದ ಶ್ರೀ ಗಳು ಸಾನಿಧ್ಯ ವಹಿಸುವರು. ಕಾರ್ಯಕ್ರಮಗಳು ಬೆಳಗಿನ ಜಾವ 5 ಗಂಟೆಯವರೆಗೂ ನಡೆಯಲಿವೆ.

ಎರಡನೇ ದಿನ ಒಟ್ಟು 52 ಕಲಾ ತಂಡಗಳು ಮತ್ತು ಕಲಾವಿದರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ವಿಜಾಪುರದ ಸನ್ ಲೈಟ್‌ ಮೆಲೋಡಿಸ್ ನ ಪ್ರಕಾಶ ಮಠ ತಂಡದಿಂದ ಮಧುರ ಗೀತೆಗಳು, ಹಾಸ್ಯ ಕಲಾವಿದ ರವಿ ಭಜಂತ್ರಿ ಅವರಿಂದ ನಗೆ ಹೊನಲು, ಸಾಲೋಟಗಿಯ ಬಸವೇಶ್ವರ ಹಂತಿ ಸಂಘದ ತಂಡದವರಿಂದ ಹಂತಿ ಹಾಡುಗಳು, ಬಿ.ಆರ್.ಯಂಪೂರೆ ತಂಡದವರಿಂದ ಹಾಸ್ಯ, ಪುಣೆಯ ಮುಕೇಶ ಜಾಧವ ಅವರಿಂದ ತಬಲಾ ಸೋಲೋ ನೃತ್ಯ ಬೆಂಗಳೂರಿನ ಕಿರುತೆರೆ ಕಲಾವಿದೆಯರಿಂದ, ಮದರಿ ಕಲಾವಿದರಿಂದ ಗೀಗೀಪದ, ಅರ್ಚನಾ ಹೆಗಡೆ ಅವರಿಂದ ಭಾವಗೀತೆ, ಆರ್.ಕೆ. ಕುಲಕರ್ಣಿ ಅವರಿಂದ ದಾಸವಾಣಿ, ನಿಂಗಣ್ಣ ನಾಯ್ಕೋಡಿ ಅವರಿಂದ ಡೊಳ್ಳು ಹಾಡು ಗೋಂದಳಿ ಹಾಡು, ದೇವಣಗಾಂವ ಬಯಲಾಟ ಮಂಡಳಿಯವರು ಭೀಮ ವಿಲಾಸ ಮುಂತಾದವುಗಳು ಸಾದರ ಪಡಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.