ADVERTISEMENT

ಕಾನೂನು ಅರಿತು ಜೀವನ ಸಾಗಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:25 IST
Last Updated 4 ಜುಲೈ 2012, 5:25 IST

ಬಸವನಬಾಗೇವಾಡಿ: ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಿದರೆ ದೇಶದ ಪ್ರಗತಿಗೆ ಪೂರಕವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಕಾನೂನು ಅರಿತುಕೊಂಡು ಜೀವನ ಸಾಗಿಸಬೇಕು ಎಂದು ಹಿರಿಯ ಶ್ರೇಣಿ ಸಿವ್ಹಿಲ್ ನ್ಯಾಯಾಧೀಶ ಮೋಹನಪ್ರಭು ಹೇಳಿದರು.

ಪಟ್ಟಣದ ಅಕ್ಕನಾಗಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹುಟ್ಟು ಸಾವಿನ ನಡುವೆ ನಡೆಸುವ ಜೀವನ ಕಾನೂನು ರೀತಿಯದ್ದಾಗಿರಬೇಕು. ಪ್ರತಿಯೊಬ್ಬರು ಸುಶಿಕ್ಷಿತರಾಗಿ ಕಾನೂನು ತಿಳಿದುಕೊಳ್ಳಬೇಕು. ಅದರಿಂದ ಜೀವನ ಸಾರ್ಥಕವಾಗುತ್ತದೆ. ಇಂದಿನ ಯುವ ಜನಾಂಗವು ಕಾನೂನು ಅರಿಯುವುದು ಸೂಕ್ತ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಪ್ರಾಚಾರ್ಯ ಎಲ್.ಎನ್. ಇಟಗಿ, ಜೀವನದಲ್ಲಿ ಎದು ರಾಗುವ ಸಮಸ್ಯೆಗಳಿಗೆ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಬೇಕು. ವರದಕ್ಷಿಣೆ ಕೊಡುವುದಾಗಲಿ ತೆಗೆದುಕೊಳ್ಳುವುದಾಗಲಿ ಅಪರಾಧ ಎಂಬುದನ್ನು ಯುವ ಜನಾಂಗ ಅರಿಯಬೇಕು ಎಂದರು.

ಕಿರಿಯ ಶ್ರೇಣಿ ಕಿರಿಯ ಶ್ರೇಣಿ ನ್ಯಾಯಾಧೀಶ ರವೀಂದ್ರ ಪಲ್ಲೇದ ಮಾತನಾಡಿದರು. ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವ ವಿಷಯ ಕುರಿತು ವಕೀಲ ಎನ್.ಎಸ್.ಪಾಟೀಲ, ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ವಕೀಲೆ ಭಾರತಿ ಪತ್ತಾರ ಮಾತನಾಡಿದರು.

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಚಿಂಚೋಳಿ, ಬಿ.ಕೆ. ಕಲ್ಲೂರ, ಎಂ.ಎನ್. ಬಿಷ್ಟಗೊಂಡ, ಡಿ.ಬಿ. ಬಾಗೇವಾಡಿ, ಸಿ.ಆರ್. ಸುಬಾನಪ್ಪನವರ, ಎಸ್.ಎಸ್. ಕೋಳೂರ, ಎನ್.ಎಸ್. ಬಿರಾದಾರ, ಎಸ್.ಎಸ್. ಬಶೆಟ್ಟಿ, ಎಚ್.ಎಸ್. ಗುರಡ್ಡಿ, ಬಿ.ಎನ್. ಪಾಟೀಲ, ಡಿ.ಆರ್. ಹಾದಿಮನಿ ಇತರರು ಉಪಸ್ಥಿತರಿದ್ದರು.
ಲಕ್ಷ್ಮೀ ಹಡಪದ ಪ್ರಾರ್ಥನಾ ಗೀತೆ ಹಾಡಿದರು. ಉಪನ್ಯಾಸಕ ಎಂ.ಬಿ. ವಗ್ಗರ ಸ್ವಾಗತಿಸಿದರು. ವಕೀಲ ಜಿ.ಬಿ. ಕನ್ನೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.