ADVERTISEMENT

ಕುಸಿದ ಮಾವು ಇಳುವರಿ: ಏರಿದ ಬೆಲೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 8:24 IST
Last Updated 19 ಮೇ 2018, 8:24 IST
ಕುಸಿದ ಮಾವು ಇಳುವರಿ: ಏರಿದ ಬೆಲೆ
ಕುಸಿದ ಮಾವು ಇಳುವರಿ: ಏರಿದ ಬೆಲೆ   

ನಾಲತವಾಡ: ಮುದ್ದೇಬಿಹಾಳ ತಾಲ್ಲೂಕು ಸೇರಿದಂತೆ ಪಟ್ಟಣದಲ್ಲಿ ಹಣ್ಣುಗಳ ರಾಜ ಮಾವು ಇಳುವರಿಯಲ್ಲಿ ಭಾರಿ ಕುಸಿತ ಕಂಡು ಬಂದಿರುವ ಕಾರಣ ಬೆಲೆ ದುಬಾರಿಯಾಗಿದೆ.

ಮಾವು ಇಳುವರಿಯು ನಾಲತವಾಡ ವ್ಯಾಪ್ತಿಯ ಮಾವಿನ ತೋಪಿನ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. ಹಣ್ಣು ಕೊರತೆಯಿಂದ ಮಾರುಕಟ್ಟೆ ಕೂಡ ಬಿಕೋ ಎನ್ನುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 50ರಷ್ಟು ಹಾನಿಯಾಗಿದೆ.

ಸತತ ಮೂರು ವರ್ಷ ಬರದಿಂದಾಗಿ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿತ್ತು. ಮಾವಿನ ಮರಗಳಿಗೆ ಸಮರ್ಪಕ ನೀರು ಹರಿಸಲೂ ಸಾಧ್ಯವಾಗಿರಲಿಲ್ಲ. ಹಾಗಾಗಿ ಮಾವಿನ ಕಾಯಿಗಳು ಪೀಚು ಇರುವಾಗಲೇ ಉದುರಿದ್ದವು.

ADVERTISEMENT

ಈಚೆಗೆ ಬೀಸಿದ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ಮಾವಿನ ಫಸಲು ಹಾನಿಯಾಗಿದ್ದು, ಮಾವಿನ ತೋಪು ಗುತ್ತಿಗೆ ಪಡೆದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು.

ಈ ಬಾರಿ ಅಕಾಲಿಕ ಮಳೆಯ ಪರಿಣಾಮ ಮಾವು ಇಳುವರಿ ಕುಸಿದಿದೆ. ವಿಪರೀತ ಬಿಸಿಲಿಗೆ ಮಾವಿನ ಕಾಯಿಯಲ್ಲಿ ಜಿಡ್ಡು ರೋಗ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾವಿನ ಹಣ್ಣುಗಳ ದರದಲ್ಲೂ ಶೇ 50 ರಷ್ಟು ಹೆಚ್ಚಳವಾಗಿದೆ. ಮಾವು ಬೆಳೆಗಾರರ ಸಂಕಷ್ಟಕ್ಕೆ ಕೂಡಲೇ ಸರ್ಕಾರ ಧಾವಿಸಬೇಕು ಮಾವು ಬೆಳೆಗಾರ ವೀರೇಶ ದಲಾಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.