ADVERTISEMENT

ಜನಸಂಖ್ಯೆ ಹೆಚ್ಚಳಕ್ಕೆ ಬಡತನ, ಅಜ್ಞಾನ ಕಾರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 8:10 IST
Last Updated 13 ಜುಲೈ 2012, 8:10 IST

ವಿಜಾಪುರ: ಬಡತನ, ಅಜ್ಞಾನ, ಮೂಢನಂಬಿಕೆ, ಕುಟುಂಬ ಯೋಜನೆ ಬಗ್ಗೆ ಜಾಗೃತಿ ಇಲ್ಲದಿರುವುದಕ್ಕೆ ಭಾರತ ದೇಶ ಜನಸಂಖ್ಯೆಯಲ್ಲಿ ತೀವ್ರ ಗತಿಯಲ್ಲಿ ಮುನ್ನುಗ್ಗುತ್ತಿರುವುದು ಆತಂಕಕಾರಿ ವಿಷಯ. ಸರ್ಕಾರ ಯಾವುದೇ ಯೋಜನೆ ರೂಪಿಸಿದರೂ ಯಶಸ್ವಿಯಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವುದು ಜನಸಂಖ್ಯೆ ಹೆಚ್ಚಳಕ್ಕೆ ಮೂಲ ಕಾರಣ ಎಂದು ಹಿರಿಯ ವೈದ್ಯ ಡಾ.ಎಸ್.ಎಸ್. ಯರನಾಳ ಹೇಳಿದರು.

ರೋಟರಿ ಕ್ಲಬ್ ಆಫ್ ವಿಜಾಪುರ ಹೆರಿಟೇಜ್ ಹಾಗೂ ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ರೋಟರಿ ಹೆರಿಟೇಜ್ ಕ್ಲಬ್ ಅಧ್ಯಕ್ಷ ಡಾ. ಖಾಲಿದ್ ಫಾರೂಖಿ, ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಮತ್ತು ಕುಟುಂಬ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರೋಟರಿ ಸಂಸ್ಥೆ ಸದಾ ಸಿದ್ಧ ಎಂದರು. ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪೀಟರ್ ಅಲೇಕ್ಸಾಂಡರ್, ಕಾರ್ಯದರ್ಶಿ ಮುದ್ದಣ್ಣ ಭೀಮನಗರ, ಡಾ. ವೀರಣ್ಣ ತೊರವಿ, ಎಸ್.ಬಿ. ಪಾಟೀಲ, ಜಿ.ಆರ್. ದೇಶಪಾಂಡೆ ಮಾತನಾಡಿದರು.

 ಎಸ್.ಬಿ. ಪಾಟೀಲ, ಗೋಪಿ ಮುದ್ದೇಬಿಹಾಳ, ಡಾ.ಉಸ್ತಾದ, ಜೋಸೆಪ್, ಶ್ಯಾಮುವೆಲ್, ಅಮಿತ್ ಕಠಾರಿಯಾ, ಅಯೂಬ್ ಪಟೇಲ್, ಸುರೇಶ ವಿಜಾಪುರ, ಅಕ್ರಂ ಮಾಶ್ಯಾಳಕರ, ದಸ್ತಗೀರ ಸಾಲೋಟಗಿ, ಡಾ. ರಮೇಶ ಬಿರಾದಾರ,  ಡಾ.ರಾಜೇಂದ್ರ ಪೋದ್ದಾರ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.