ADVERTISEMENT

ಜಿಎಸ್‌ಎಸ್‌ ನಿಧನ: ಕುವೆಂಪು ಕೊಂಡಿ ಕಳಚಿತು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:43 IST
Last Updated 24 ಡಿಸೆಂಬರ್ 2013, 6:43 IST

ವಿಜಾಪುರ: ಮೇರು ವ್ಯಕ್ತಿತ್ವದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನಿಧನ ಕಾವ್ಯಲೋಕಕ್ಕೆ ತುಂಬಲಾರದ ನಷ್ಟ. ಕುವೆಂಪು ಯುಗದ ಕೊಂಡಿ ಕಳಚಿತು ಎಂದು ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.

ಇಲ್ಲಿಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ಸಂಶೋಧನ ಕೇಂದ್ರದ ಅಧ್ಯಕ್ಷ ಶಿವಯೋಗಿ ತಂಬಾಕೆ, ಬಿ.ಎಲ್.ಡಿ.ಇ. ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಜಿ. ಮೂಲಿಮನಿ, ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಂ.ಎಸ್. ಮದಭಾವಿ, ಪ್ರಚಾರ ಅಧಿಕಾರಿ ಡಾ. ಮಹಾಂತೇಶ ಬಿರಾದಾರ ಮತ್ತಿತರರು ಸಂತಾಪ ಸೂಚಿಸಿದರು.

ಗಣ್ಯರ ಕಂಬನಿ
ಸಿಂದಗಿ:
ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪನವರ ಅಗಲುವಿಕೆಗೆ ಸಿಂದಗಿಯಲ್ಲಿ ಗಣ್ಯರು ಕಂಬನಿ ಮಿಡಿದಿದ್ದಾರೆ.

ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ ಡಾ.ಬಿ.ಆರ್.ನಾಡಗೌಡ, ನೆಲೆ ಪ್ರಕಾಶನದ ಡಾ.ಎಂ.ಎಂ.ಪಡಶೆಟ್ಟಿ, ಡಾ.ಚನ್ನಪ್ಪ ಕಟ್ಟಿ, ಮಕ್ಕಳ ಸಂಗಮ ಜಿಲ್ಲಾ ಘಟಕದ ಅಧ್ಯಕ್ಷ ಹ.ಮ. ಪೂಜಾರ, ಕವಯತ್ರಿ ಗೀತಾ ಹರಿಹರ, ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಾರದ, ಉಪಾಧ್ಯಕ್ಷ ಅಶೋಕ ಮನಗೂಳಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪ್ರಮುಖ ವಿ.ಡಿ.ವಸ್ತ್ರದ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಡಾ.ನಾಗರಾಜ ಮುರಗೋಡ, ಪ್ರಾಚಾರ್ಯ ಡಾ.ವಿವೇಕಾನಂದ ಸಾಲಿಮಠ, ಪ್ರಾಚಾರ್ಯ ಎಂ.ಡಿ.ಬಳಗಾ ನೂರ, ಹಿರಿಯ ಉಪನ್ಯಾಸಕ ರಾ.ಶಿ.ವಾಡೇದ  ಗಣ್ಯರು     ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.