ADVERTISEMENT

ಟಿಪ್ಪುಸುಲ್ತಾನ್ ಜಯಂತಿ: ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:02 IST
Last Updated 7 ಜನವರಿ 2014, 6:02 IST

ಆಲಮೇಲ: ಪೊಲೀಸರೊಂದಿಗೆ ಸಾರ್ವ ಜನಿಕರು ಸಹಕರಿಸಬೇಕು ಎಂದು ಡಿವೈಎಸ್‌ಪಿ ಶಿವಕುಮಾರ ಗುಣಾರೆ ಹೇಳಿದರು.
ಆಲಮೇಲದ ಪೊಲೀಸ್‌ ಠಾಣೆ ಯಲ್ಲಿ ಸೋಮವಾರ ಟಿಪ್ಪು ಸಲ್ತಾನ್ ಜಯಂತಿ ಆಚರಣೆ ಕಾರ್ಯ ಕ್ರಮದ ಮುಂಜಾಗೃತೆಗಾಗಿ ಕರೆದ ಶಾಂತಿ ಸಭೆಯಲ್ಲಿ ಅವರು ಮಾತ ನಾಡಿದರು.

ಯಾವುದೇ ಸಂದರ್ಭದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬಾರದು. ಕಿಡಿಗೇಡಿ ಯುವಕರನ್ನು ತಮ್ಮ ಹದ್ದು ಬಸ್ತಿನಲ್ಲಿಡಬೇಕು.  ಅಶಾಂತಿ ವಾತ ವಾರಣ ನಿರ್ಮಾಣಮಾಡಲು ಅವ ಕಾಶ ನೀಡಬಾರದು ಎಂದರು.

ಸಿಪಿಐ  ಗಂಗಾಧರ ಅವರು ಮಾತ ನಾಡಿ ಡಾಲ್ಬಿ , ಹಾಗೂ ಅಹಿತಕರ ಘಟನೆಗೆ ಕಾರಣವಾಗುವ ಹಾಡು ಗಳನ್ನು ನಿಷೇಧಿಸಿದೆ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್  ಅಶ್ವತ್ಥನಾರಾಯಣ ಶಾಸ್ತ್ರೀ  ಹಾಗೂ  ಟಿಪ್ಪು ಸುಲ್ತಾನ್ ಕಮಿಟಿಯ ಅಧ್ಯಕ್ಷ ಸಾಧಿಕ ಸುಂಬಡ, ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಭಂಟನೂರ, ಮೆಹಬೂಬ್ ಮಸಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಯೂಬ್  ದೇವರಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಣಮಂತ ಹೂಗಾರ, ದೇವಪ್ಪ ಗುಣಾರಿ, ಎಲ್‌ ಎಸ್‌.ಸುಂಬಡ   ಮಾತನಾಡಿದರು.

ಆಲಮೇಲ ಪಿಎಸ್‌ಐ ಗೋಪಾಲ ಹಳ್ಳೂರ ಸ್ವಾಗತಿಸಿರು. ಶ್ರೀಶೈಲ ಮಠಪತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.