ವಿಜಾಪುರ: ರಾಜ್ಯದಲ್ಲಿಯೇ ಅತ್ಯಧಿಕ ಲಂಬಾಣಿ ಜನಾಂಗವನ್ನು ಹೊಂದಿರುವ ವಿಜಾಪುರ ಜಿಲ್ಲೆಯ ತಾಂಡಾಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಚಿಂತನೆ ನಡೆಸಿದೆ ಎಂದು ರಾಜ್ಯ ಬಂಜಾರಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯಕ ಹೇಳಿದರು. ತಾಲ್ಲೂಕಿನ ಅರಕೇರಿ ತಾಂಡಾ ನಂ.3ಕ್ಕೆ ಭೇಟಿ ಮಾತನಾಡಿದರು. ರಾಜ್ಯದಲ್ಲಿರುವ 3500 ತಾಂಡಾಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ತಾವು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಜಿಲ್ಲೆಯಲ್ಲಿ 586 ತಾಂಡಾಗಳು ಇವೆ. ರಾಜ್ಯದಲ್ಲಿಯೇ ಅತಿ ಹೆಚ್ಚು ತಾಂಡಾ ಹಾಗೂ ಲಂಬಾಣಿ ಜನಸಂಖ್ಯೆಯನ್ನು ಈ ಜಿಲ್ಲೆ ಹೊಂದಿದೆ ಎಂದರು.
ಅಖಿಲ ಭಾರತ ಬಂಜಾರಾ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ರಾಠೋಡ ಮಾತನಾಡಿ, ಸರ್ಕಾರ ಬಂಜಾರಾ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ವಿಜಾಪುರ ಬರಗಾಲ ಜಿಲ್ಲೆ. ಇಲ್ಲಿಯ ಲಂಬಾಣಿ ಜನಾಂಗದವರು ಪ್ರತಿ ವರ್ಷ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದರು.
ಅಖಿಲ ಭಾರತ ಬಂಜಾರಾ ಸೇವಾ ಸಂಘದ ನೌಕರರ ಘಟಕದ ಅಧ್ಯಕ್ಷ ಬಿ.ಬಿ. ನಾಯಕ, ಚಂದ್ರಶೇಖರ ಚವ್ಹಾಣ, ಲಕ್ಷ್ಮಣ ಅಂಗಡಿ, ಜನಗು ಮಹಾರಾಜ, ಪಿ.ಎ. ಪಾಟೀಲ, ಶಿವಾಜಿ ಚವ್ಹಾಣ, ರಾಮಸಿಂಗ್ ನಾಯಕ, ಕಾಸು ಜಾಧವ, ಪ್ರಕಾಶ ಜಾಧವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.