ADVERTISEMENT

ನವರಾತ್ರಿ:ದುರ್ಗಾದೇವಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 9:30 IST
Last Updated 1 ಅಕ್ಟೋಬರ್ 2011, 9:30 IST

ತಾಂಬಾ: ಗ್ರಾಮದಲ್ಲಿ ಶ್ರೀಅಂಬಾಭವಾನಿ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಮೈಸೂರು ಮಾದರಿಯಲ್ಲಿ ವಿಜೃಂಭಣೆಯಿಂದ ದಸರಾ ಆಚರಣೆ ಮಾಡಲು ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು  ಜಿ.ಪಂ ಸದಸ್ಯ ದೇವಾನಂದ ಚವ್ಹಾಣ ಹೇಳಿದರು.

ತಾಂಬಾ ಗ್ರಾಮದಲ್ಲಿ ಅಂಬಾಭವಾನಿ ಎಜುಕೇಶನ್ ಟ್ರಸ್ಟ್ ಹಮ್ಮಿಕೊಂಡ ನವರಾತ್ರಿ ಉತ್ಸವದಲ್ಲಿ ಮಾತನಾಡಿದ ಅವರು, ತಾಂಬಾ ನಾಡದೇವಿ ಹಬ್ಬ ಮೈಸೂರು ದಸರಾವನ್ನು ನೆನಪಿಸುತ್ತಿದೆ. ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಂದ ಜನಪದ ತಂಡಗಳನ್ನು ಒಟ್ಟುಗೂಡಿಸಿ ಕಲಾಪ್ರದರ್ಶನಕ್ಕೆ ವೇದಿಕೆ ಒದಗಿಸುತ್ತ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಮೆರವಣಿಗೆ: ಅಲಂಕರಿಸಿದ ವಾಹನದಲ್ಲಿ ದೇವಿಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ 101 ಕುಂಭ ಹೊತ್ತ ಲಂಬಾಣಿ ಮಹಿಳೆಯರು ಭಾಗವಹಿಸಿದ್ದರು. ಕಣಬೂರದ ರಾಚೋಟೇಶ್ವರ ಝಾಂಜ್ ಪಥಕ್,  ನವಿಲು ಮತ್ತು ಕೀಲು ಕುದುರೆ ಕುಣಿತ, ಡೊಳ್ಳು ಕುಣಿತ ಮತು ಬ್ರಾಸ್ ಬ್ಯಾಂಡ್ ಮತ್ತಿತರ ಕಲಾ ತಂಡಗಳು ಹಾಗೂ ಸುತ್ತಲಿನ ಗ್ರಾಮದ ಸಾವಿರಾರು ಜನರು ಪಾಲ್ಗೊಂಡಿದ್ದರು.

ಜಿ.ಪಂ. ಸದಸ್ಯ ದೇವಾನಂದ ಎಫ್ ಚವ್ಹಾಣ, ಜಗದಂಬಾ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಜಿ.ಬಿ.ಅಂಗಡಿ, ರಾಮಸಿಂಗ್ ಚವ್ಹಾಣ, ಸಿ.ಜಿ. ಗೌರ, ಸಿ.ಜಿ. ರಾಠೋಡ, ಸುನಿತಾ ಚವ್ಹಾಣ, ಮಮ್ಮಿತಾ ಚವ್ಹಾಣ, ಎಸ್.ಸಿ. ಮಠ. ಎಸ್.ಎನ್.ಪಾಟೀಲ, ಹರಸಿಂಗ್ ಚವ್ಹಾಣ, ದಳಪತಿ ಚವ್ಹಾಣ, ಎಸ್.ವಿ. ಮುಂಜಿ, ವಿ.ಆರ್. ದೊಡಮನಿ, ಡಿ.ಎಂ. ನಿಂಬಾಳ, ಆರ್.ಎ. ಹೊರ್ತಿ. ಬಿ.ಎಚ್. ಚವ್ಹಾಣ, ವಸಂತರಾಯ ರಾಠೋಡ, ಲಕ್ಷ್ಮಣ ಜಾಧವ ಮತ್ತಿತರರು ಉಪಸ್ಥಿತರಿದ್ದರು.   

ಪ್ರಶಸ್ತಿ: ತಾಂಬಾ ಸಮೀಪದ ಬಂಥನಾಳ ಗ್ರಾಮದ ಸ.ಶಿ. ಎಚ್.ಪಿ. ಶಿಕ್ಷಕ ಎಂ. ಎಂ. ವಾಲೀಕಾರ ಅವರಿಗೆ, ಇತ್ತೀಚೆಗೆ ವಿಜಾಪುರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಜಿಲ್ಲಾ ಉಪನಿರ್ದೆಶಕ ಬಿ ಎನ್ ಹಕೀಮ ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ  ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.