ಬಸವನಬಾಗೇವಾಡಿ: ಉತ್ತಮ ಪರಿಸರದಿಂದ ಮಾತ್ರ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಪಲ್ಲೇದ ರವೀಂದ್ರ ಹೇಳಿದರು.
ಸ್ಥಳೀಯ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಹಾಗೂ ವಿದ್ಯಾರ್ಥಿಗಳಿಗೆ ಸಸಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮರ-ಗಿಡಗಳು ಮಾನವನಿಗೆ ಬೇಕಾದ ಆಮ್ಲಜನಕ ಉತ್ಪಾದಿಸುತ್ತವೆ. ಅವುಗಳ ರಕ್ಷಣೆಗೆ ಉದಾಸೀನ ಸಲ್ಲದು ಕಾನೂನು ಕೂಡಾ ಪರಿಸರ ರಕ್ಷಣೆಗೆ ಸಹಾಯಕವಾಗಿದ್ದು ಇತ್ತೀಚೆಗೆ ಹಲವು ತೀರ್ಪುಗಳು ಬಂದಿವೆ. ಇಂದು ಪ್ರತಿಯೊಬ್ಬರು ಮೊಬೈಲ್‌ಗೆ ಮೊರೆ ಹೋಗಿದ್ದು, ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತದೆ ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್‌ಗಳನ್ನು ಬಳಸಬೇಕು ಎಂದು ಹೇಳಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎನ್.ಎಸ್.ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಮಾತನಾಡಿದರು, ಅರಣ್ಯ ಕಾಯ್ದೆ ಹಾಗೂ ಪರಿಸರ ಸಂರಕ್ಷಣೆ ಕುರಿತಾಗಿ ವಕೀಲ ಜಿ.ಬಿ.ಬಾಗೇವಾಡಿ ಉಪನ್ಯಾಸ ನೀಡಿದರು,
ಕಾರ್ಯಕ್ರಮದಲ್ಲಿ ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಮುಖ್ಯೋಪಾಧ್ಯಾಯ ಬಿ.ಎಚ್.ಕುಂಚಗನೂರ, ಅರಣ್ಯ ಇಲಾಖೆಯ ಕೊಟ್ಟಲಗಿ, ಬಿ.ಆರ್.ಅಡ್ಡೋಡಗಿ, ಶಿಕ್ಷಣ ಸಂಯೋಜಕ ಎಸ್.ಬಿ.ಹಿಪ್ಪರಗಿ ಮುಂತಾದವರು ಉಪಸ್ಥಿತರಿದ್ದರು,
ಗೋದಾವರಿ ಕುಲಕರ್ಣಿ ಹಾಗೂ ಶ್ವೇತಾ ಮಣ್ಣೂರ ಪ್ರಾರ್ಥನಾ ಗೀತೆ ಹಾಡಿದರು. ಪಿ.ಎನ್.ಪತ್ತಾರ ಸ್ವಾಗತಿಸಿದರು, ಶಿಕ್ಷಕ ವಿ.ಎಚ್.ರಾಠೋಡ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.